ಅಂತಾರಾಷ್ಟ್ರೀಯಕ್ರೀಡೆರಾಷ್ಟ್ರೀಯ

ಹ್ಯಾಟ್ರಿಕ್ ಸೊನ್ನೆ ಸುತ್ತಿದ ಸೂರ್ಯ: ಏಕದಿನ ಪಂದ್ಯಾಟದಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ T20 ಸ್ಪೆಷಲಿಸ್ಟ್



ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಮತ್ತೊಮ್ಮೆ ಶೂನ್ಯಕ್ಕೆ ತಮ್ಮ ವಿಕೆಟ್ ಒಪ್ಪಿಸಿದ್ದು ಏಕದಿನ ಪಂದ್ಯಗಳಲ್ಲಿ ನಿರಂತರವಾಗಿ ಶೂನ್ಯಕ್ಕೆ ಔಟಾಗುತ್ತಿದ್ದಾರೆ.

ಆಸೀಸ್ ವಿರುದ್ಧ ಮಾ.22ರಂದು ನಡೆದ ಸರಣಿಯ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲೂ ಅವರು ಎದುರಿಸಿದ ಪ್ರಥಮ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ. 5 ಕ್ರಮಾಂಕದಲ್ಲಿ ಅವರು ಆಡಲಿಳಿದ್ದರು.

ಆಸೀಸ್ ವಿರುದ್ದದ ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಸ್ಟಾರ್ಕ್ ಅವರ ಮೊದಲ ಎಸೆತದಲ್ಲೇ ಸೂರ್ಯಕುಮಾರ್ ಔಟಾಗಿದ್ದರು.ಎರಡನೇ ಪಂದ್ಯದಲ್ಲೂ ತಾನೆದುರಿಸಿದ ಮೊದಲ ಎಸೆತದಲ್ಲೇ ಎಲ್ ಬಿ ಬಲೆಗೆ ಬಿದ್ದು ಔಟಾಗಿದ್ದರು.



32ರ ಹರೆಯದ ಸೂರ್ಯ ಕುಮಾರ್ ಯಾದವ್ ಅವರು ಅದ್ಭುತ ಟಿ20 ದಾಖಲೆ ಹೊಂದಿದ್ದು ಬ್ಯಾಟಿಂಗ್ ನಲ್ಲಿ ಆಗ್ರ ಸ್ಥಾನಿಯಾಗಿದ್ದಾರೆ. ಏಕದಿನ ಮಾದರಿಯಲ್ಲಿ ಮಾತ್ರ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!