ಸೂರಿಕುಮೇರು ಸುನ್ನೀ ಸಂಘಟನೆಗಳಿಂದ
ರಂಝಾನ್ ಕಿಟ್ ವಿತರಣೆ
ಮಾಣಿ: ಕರ್ನಾಟಕ ಮುಸ್ಲಿಂ ಜಮಾಅತ್ KMJ, ಸುನ್ನೀ ಯುವಜನ ಸಂಘ SYS ,ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ಸೂರಿಕುಮೇರು ಯುನಿಟ್ ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ರೇಶನ್ ಕಿಟ್ ವಿತರಿಸಲಾಯಿತು.

ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸೂರಿಕುಮೇರು ಯುನಿಟ್ ಅಧ್ಯಕ್ಷರಾದ ಯೂಸುಫ್ ಹಾಜಿ ಅಧ್ಯಕ್ಷತೆಯಲ್ಲಿ ನಝೀರ್ ಅಹ್ಮದ್ ಅಮ್ಜದಿ ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೆಎಂಜೆ ಕಾರ್ಯದರ್ಶಿ ಕರೀಂ ನೆಲ್ಲಿ,ಸುಲೈಮಾನ್ ಸೂರಿಕುಮೇರು,ಹಂಝ ಸೂರಿಕುಮೇರು,ಎಸ್ಸೆಸ್ಸೆಫ್ ನಾಯಕರಾದ ಮುಈನುದ್ದೀನ್ ಮಾಣಿ,ಅಜ್ಮಲ್ ಮಾಣಿ, ಮುಂತಾದವರು ಉಪಸ್ಥಿತರಿದ್ದರು. ಎಸ್‌ವೈಎಸ್ ಮಾಣಿ ಸರ್ಕಲ್ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.