ಐಸಿಸಿ ಅಧ್ಯಕ್ಷರಾಗಿ 2ನೇ ಅವಧಿಗೆ ಜಯ್ ಶಾ ಅವಿರೋಧ ಆಯ್ಕೆ
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷರಾಗಿ 2ನೇ ಅವಧಿಗೆ ಜಯ್ ಶಾ ಅವಿರೋಧವಾಗಿ ಮರು ನೇಮಕಗೊಂಡಿದ್ದಾರೆ.

ಐಸಿಸಿ ನಿರ್ದೇಶಕರು ಮಂಡಿಸಿದ ಪ್ರಸ್ತಾವನೆಯ ಮೇರೆಗೆ ಬಾಲಿಯಲ್ಲಿ ನಡೆದ ಜಾಗತಿಕ ಕ್ರಿಕೆಟ್ ಸಂಸ್ಥೆಯ ಮಂಡಳಿ ಮತ್ತು ಸಮಿತಿ ಸಭೆಗಳಲ್ಲಿ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಮರುನೇಮಕಕ್ಕೆ ಧನ್ಯವಾದ ತಿಳಿಸಿದ ಜಯ್ ಶಾ, “ಐಸಿಸಿಯನ್ನು ಮುನ್ನಡೆಸುವುದು ಗೌರವ ಮತ್ತು ಪ್ರಮುಖ ಜವಾಬ್ದಾರಿ ಎಂದು ತಿಳಿಸಿದ್ದಾರೆ.




