ಪಡುಬಿದ್ರಿ: ಟ್ಯಾಂಕರ್-ಸ್ಕೂಟರ್ ನಡುವೆ ಭೀಕರ ಅಪಘಾತ- ದಂಪತಿ ಸ್ಥಳದಲ್ಲೇ ಸಾವು
ಪಡುಬಿದ್ರಿ ಠಾಣಾ ವ್ಯಾಪ್ತಿಯ ಮೂಲ್ಕಿ ಸೇತುವೆ ಮೇಲೆ ಟ್ಯಾಂಕರ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಮಾ.7ರಂದು ಮಧ್ಯಾಹ್ನ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಮೂಲ್ಕಿ ಸೇತುವೆಯಲ್ಲಿ ಘಟನೆ ನಡೆದಿದ್ದು, ಆಕ್ಟಿವಾ ದ್ವಿಚಕ್ರ ವಾಹನ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ಯಾಂಕರ್ ಇಬ್ಬರ ತಲೆಯ ಮೇಲೆ ಹರಿದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತರನ್ನು ತೀರ್ಥಹಳ್ಳಿ ಕೋಳಿಕಾಲುಗುಡ್ಡೆ ನಿವಾಸಿ ಅಕ್ಬರ್ ಪಾಶ(60. ವ) ಹಾಗೂ ಅವರ ಪತ್ನಿ ಖತೀಜಾಬಿ(45.ವ ) ಎಂದು ಗುರುತಿಸಲಾಗಿದೆ.
ಇವರುಮಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.