ನನ್ನ ಭಾಷಣವನ್ನು ತಿರುಚಲಾಗಿದೆ, ನಾನು ಯಾರೆಂದು ಜನತೆಗೆ ತಿಳಿದಿದೆ-ಅಶೋಕ್ ರೈ
ಪುತ್ತೂರು: ನಾನು ಮಾಡಿರುವ ಭಾಷಣದ ತುಣುಕನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗುತ್ತಿದೆ. ನನ್ನ ಭಾಷಣವನ್ನು ತಿರುಚಿ ಕತ್ತರಿಸಲಾಗಿದ್ದು ಇದನ್ನು ಯಾರೂ ನಂಬುವುದಿಲ್ಲ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

‘ಬಿಜೆಪಿಯವರು ಅಕ್ರಮ ಸಕ್ರಮ ಮತ್ತು 94ಸಿ ಯಲ್ಲಿ ಲಂಚ, ಭ್ರಷ್ಟಾಚಾರದ ಕೆಲಸ ಮಾಡುತ್ತಿದ್ದು ನಿಮಗೆ ಬುದ್ದಿ ಕಲಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೇನೆ, ಆ ಹೇಳಿಕೆಗೆ ಈಗಲೂ ಬದ್ದ, ನಾನು ಬಿಜೆಪಿ ಪಕ್ಷ ಅಥವಾ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡಿಲ್ಲ, ಹೀಗೆಲ್ಲಾ ಅಪಪ್ರಚಾರ ಮಾಡುವುದರಿಂದ ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಾನು ಯಾರೆಂದು ಜನರಿಗೆ ಗೊತ್ತಿದೆ. ನಾನು ಯಾರನ್ನೂ ನಿಂದಿಸುವವ ಅಲ್ಲ, ನನ್ನ ಸ್ವಭಾವವೂ ಅದಲ್ಲ. ಸುಳ್ಳು ಸುದ್ದಿ ಹಬ್ಬಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಅವರು ಹೇಳಿದರು.
ಭ್ರಷ್ಟಾಚಾರಕ್ಕೆ ನಾನು ಯಾವತ್ತೂ ವಿರೋಧ, ನನ್ನದೇನಿದ್ದರೂ ಅಭಿವೃದ್ಧಿ ಪರವಾದ ವಿಚಾರ ಮಾತ್ರ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.