ಕಲ್ಲೇರಿ: ಬೈಕ್’ಗಳ ಮಧ್ಯೆ ಡಿಕ್ಕಿ, ಓರ್ವ ಮೃತ್ಯು, ನಾಲ್ವರಿಗೆ ಗಾಯ
ಉಪ್ಪಿನಂಗಡಿ: ಬೈಕ್‍ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಉಪ್ಪಿನಂಗಡಿ ಕಲ್ಲೇರಿ ಸಮೀಪದ ತುರ್ಕಳಿಕೆ ಎಂಬಲ್ಲಿ ನಡೆದಿದೆ.

ಬಾರ್ಯ ಪರಿಸರದ ನಿವಾಸಿಗಳಾದ ಶಿವಾನಂದ ಮತ್ತು ಅವರ ಸಹೋದರ ಕಲ್ಲೇರಿಯಿಂದ ಬಾರ್ಯದಲ್ಲಿರುವ ತಮ್ಮ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕರೀಂ ಎಂಬವರು ಬೈಕ್ ಚಲಾಯಿಸಿಕೊಂಡು ಬಂದಿದ್ದು, ಈ ಸಂದರ್ಭ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಶಿವಾನಂದ ಎಂಬವರು ರಸ್ತೆಗೆಸೆಯಲ್ಪಟ್ಟು, ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಧನಂಜಯ, ರವಿ, ಅಸ್ಮಾನ್ ಹಾಗೂ ಕರೀಂ ಎಂಬವರು ಗಾಯಗೊಂಡಿದ್ದು, ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.