ಕರಾವಳಿಕ್ರೈಂ

ಫೇಸ್ ಬುಕ್ ನಲ್ಲಿ ಬಂದ ಜಾಹೀರಾತು ನಂಬಿ ಟ್ರೇಡಿಂಗ್ ನಲ್ಲಿ ಹಣ ಇನ್ವೆಸ್ಟ್ಮೆಂಟ್: ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ



ಪುತ್ತೂರು : ಟ್ರೇಡಿಂಗ್ ನಲ್ಲಿ ಹಣ ಇನ್ವೆಸ್ಟ್ಮೆಂಟ್ ಮಾಡಿ ವ್ಯಕ್ತಿಯೋರ್ವರು ಲಕ್ಷಾಂತರ ರೂ. ವಂಚನೆಗೊಳಗಾಗಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ನಿವಾಸಿ ಜಾನ್ ಪ್ರವೀಣ್ ಮಾಡ್ತಾ (46) ಎಂಬವರು 13-06-2024 ರಂದು Facebook ನಲ್ಲಿ trading ಬಗ್ಗೆ ಬಂದ ಜಾಹಿರಾತಿನಲ್ಲಿದ್ದ ಲಿಂಕ್ ಮೂಲಕ Accel S tudent Group C851 ಎಂಬ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿದ್ದು, ವಾಟ್ಸಾಪ್ ಗ್ರೂಪ್ ನಿಂದ ಟ್ರೇಡಿಂಗ್ ಬಗ್ಗೆ ಮಾಹಿತಿ ಕಳುಹಿಸಿರುತ್ತಾರೆ.

ಅದರಂತೆ ACVVL online APP ನ್ನು ಇನ್ಸ್ಟಾಲ್ ಮಾಡಿದ್ದು, ನಂತರ ಸದ್ರಿ ACVVL online App ನಲ್ಲಿ ಹಣ ಇನ್ವೆಸ್ಟ್ಮೆಂಟ್ ಮಾಡಲು ಹೇಳಿ ಅವರು ವಿವಿಧ ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಬ್ಯಾಂಕ್ ಖಾತೆಗಳಿಗೆ ಜಾನ್ ಅವರ ಪತ್ನಿಯ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ವರ್ಗಾವಣೆ ಮಾಡಿದ್ದು, ಅದರಲ್ಲಿ 21,000 ರೂ. ಹಣ ವಾಪಾಸ್ ಬಂದಿದ್ದು, APP ನಲ್ಲಿ ಜಾನ್ ಇನ್ವೆಸ್ಟ್ಮೆಂಟ್ ಮಾಡಿದ ಹಣ ಡಿಸ್ಪ್ಲೇಯಲ್ಲಿ ತೋರಿಸುತ್ತಿದ್ದರಿಂದ ಜಾನ್ ಹಣ ಹಾಕಿದ್ದು, ನಂತರ ಯಾವುದೇ ಹಣ ವಾಪಾಸ್ ಬಂದಿರುವುದಿಲ್ಲ. ಫೇಸ್ಬುಕ್ ನಲ್ಲಿ ಟ್ರೇಡಿಂಗ್ ಬಗ್ಗೆ ಬಂದ ಜಾಹೀರಾತು ನೋಡಿ 22,35,000 ರೂ. ಹಣ ಇನ್ವೆಸ್ಟ್ಮೆಂಟ್ ಮಾಡಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2024 ಕಲಂ: 66 (C) 66 (D) IT ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!