ಈಡನ್ ಗ್ಲೋಬಲ್ ಸ್ಕೂಲ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ
ಪುತ್ತೂರು: 2024-25ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈಡೆನ್ ಗ್ಲೋಬಲ್ ಸ್ಕೂಲ್ ಉತ್ತಮ ಸಾಧನೆಯೊಂದಿಗೆ ಮತ್ತೊಮ್ಮೆ ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಮಹಮ್ಮದ್ ಸುಹಾನ್ 605, ರಿಫಾ ಫಾತಿಮಾ 602, ಅರ್ಶನ 602, ಮುಹಮ್ಮದ್ ಅಝೀಂ 592, ಆಯಿಷಾ ಇಫಾ 590, ಅಮ್ನ ಫಾತಿಮಾ 582, ಫಾತಿಮಾ ನಿಮಿಯಾ 561 ಮೊಹಮ್ಮದ ಶಾಯೀಝ್ 555,ಮಹಮ್ಮದ್ ಅಝೀಂ 546 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಪರೀಕ್ಷೆ ಬರೆದ ಒಟ್ಟು 22 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳನ್ನು ಆಡಳಿತ ಸಮಿತಿ, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.