ಉಪ್ಪಿನಂಗಡಿ: ತಿನ್ನಲು ಕೈ ಇಲ್ಲದ ವ್ಯಕ್ತಿಯ ಬಾಯಿಗೆ ಅನ್ನ ಕೊಟ್ಟು ಹಸಿವು ನೀಗಿಸಿದ ಕ್ಯಾಂಟೀನ್ ಸಿಬ್ಬಂದಿ..!
ಫೋಟೋ ವೈರಲ್
ಉಪ್ಪಿನಂಗಡಿ: ಕೈ ಇಲ್ಲದ ವ್ಯಕ್ತಿಯೋರ್ವವರಿಗೆ ಹಸಿವು ನೀಗಿಸಲು ಕ್ಯಾಂಟಿನ್‌ನ ಸಿಬ್ಬಂದಿಯೊಬ್ಬರು ಅನ್ನವನ್ನು ಬಾಯಿ ಕೊಡುವ ಪೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕ್ಯಾಂಟಿನ್ ನಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್ಲಾ ಎಂಬುವವರು ಎರಡೂ ಕೈಗಳಿಲ್ಲದ ವ್ಯಕ್ತಿಯೋರ್ವರಿಗೆ ಹಸಿವು ನೀಗಿಸಿವ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಈ ಬಗ್ಗೆ ಬರಹಗಾರ, ಕವಿ ಜಲೀಲ್ ಮುಕ್ರಿಯವರು ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ರೀತಿ ಬರೆಯುತ್ತಾರೆ:
“ಅವರಿಗೆ ಹಸಿವಾಗಿತ್ತು.ತಿನ್ನಲು ಕೈಗಳಿಲ್ಲ. ಮುನ್ನಿ ಚಪ್ಪಲ್ಸ್ ಪಕ್ಕದ ಎಂ.ಎಚ್ ಕ್ಯಾಂಟಿನ್ ನಲ್ಲಿ ಈ ದೃಶ್ಯ ಕಂಡು ಸೆರೆ ಹಿಡಿದೆ.ತಿನ್ನಿಸುವವರಾರೋ,? ತಿನ್ನುವವರಾರೋ.?
ಎಲ್ಲಿಯ ಋಣಾನುಬಂಧವೋ?.
ಕ್ಯಾಂಟಿನ್ ನಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್ಲಾ ಎಂಬುವವರು ಎರಡೂ ಕೈಗಳಿಲ್ಲದ ಮನುಷ್ಯನೊಬ್ಬನ ಹಸಿವು ನೀಗಿಸಿದರು. ಉಣ್ಣುವ ಬಟ್ಟಲನ್ನೇ ಕಸಿಯುವ, ಉಣ್ಣುವ ಕೈಗಳನ್ನೇ ತುಂಡರಿಸುವ ಕಾಲದಲ್ಲಿ ಇದು ಇಷ್ಟವಾಯಿತು.
ಅವರಿಗೆ ಹಸಿವಾಗಿತ್ತು.ತಿನ್ನಲು ಕೈಗಳಿಲ್ಲ. ಮುನ್ನಿ ಚಪ್ಪಲ್ಸ್ ಪಕ್ಕದ ಎಂ.ಎಚ್ ಕ್ಯಾಂಟಿನ್ ನಲ್ಲಿ ಈ ದೃಶ್ಯ ಕಂಡು ಸೆರೆ ಹಿಡಿದೆ.ತಿನ್ನಿಸುವವರಾರೋ,? ತಿನ್ನುವವರಾರೋ.?
ಎಲ್ಲಿಯ ಋಣಾನುಬಂಧವೋ?.ಕ್ಯಾAಟಿನ್ ನಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್ಲಾ ಎಂಬುವವರು ಎರಡೂ ಕೈಗಳಿಲ್ಲದ ಮನುಷ್ಯನೊಬ್ಬನ ಹಸಿವು ನೀಗಿಸಿದರು.ಉಣ್ಣುವ ಬಟ್ಟಲನ್ನೇ ಕಸಿಯುವ, ಉಣ್ಣುವ ಕೈಗಳನ್ನೇ ತುಂಡರಿಸುವ ಕಾಲದಲ್ಲಿ ಇದು ಇಷ್ಟವಾಯಿತು.