ಕರಾವಳಿ

ಎಣ್ಮೂರು ಮಖಾಂ ಉರೂಸ್: ಇತಿಹಾಸದ ಪುನರಾವಲೋಕನ…!!

ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮ ಹಲವಾರು ಕಾರಣಗಳಿಗೆ ಚರಿತ್ರೆ ಪ್ರಸಿದ್ದವಾದುದು.ಇಲ್ಲಿ ರಾಜವಂಶಿಕರಿಂದ ಹಿಡಿದು ಪಟೇಲ್ ಮನೆತನದವರು ಆಡಳಿತ ನಡೆಸಿದ ಇತಿಹಾಸಗಳಿವೆ.

ಸುತ್ತಲಿನ ಸುಮಾರು 5 ಜಮಾಅತ್ ಗಳ ಮಾತೃ ಜಮಾಅತ್ ಆಗಿರುವ “ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸೀದಿ”ಗೆ ದಶಕಗಳ ಇತಿಹಾಸವಿದೆ.ಬಹಳಷ್ಟು ಶ್ರೀಮಂತರು ಇಲ್ಲದೆ ಬಡ ಮತ್ತು ಮಧ್ಯಮ ವರ್ಗದವರೇ ಇರುವ ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಜರುಗಿವೆ.ಸುಂದರ ಶಾದಿಮಹಲ್ ನಿರ್ಮಾಣಗೊಂಡಿದೆ.

ಯಾತ್ರಾ ನಿವಾಸ ನಿರ್ಮಾಣ ಹಂತದಲ್ಲಿದೆ. ಕೃಷಿ ಕಾರ್ಯಗಳು ಪ್ರಗತಿಯಲ್ಲಿವೆ.ಯುವ ಸಂಘಟನೆ(MYS) ವತಿಯಿಂದ ಪ್ರತಿ ವರ್ಷ ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯ ನೆರವೇರುತ್ತಿವೆ.

ಇಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ “ವಲಿಯುಲ್ಲಾಹಿ ಮಶ್ ಹೂರತ್ ಬೀವಿ(ರ.ಅ.)”ರವರ ದರ್ಗಾ ಶರೀಫ್ ಸರ್ವ ಧರ್ಮೀಯರ ಆಧ್ಯಾತ್ಮಿಕ ಶ್ರದ್ದಾಕೇಂದ್ರವಾಗಿದೆ.ತಮ್ಮ ಕಷ್ಟ, ಕಾರ್ಪಣ್ಯಗಳಿಗೆ,ಮನದಿಚ್ಚೆಗಳಿಗೆ ಇಲ್ಲಿ ಬಂದು ಪ್ರಾರ್ಥಿಸಿ ಪರಿಹಾರಕಂಡವರು ಬಹಳಷ್ಟು.

ಆ ಮಹದಿಯ ಹೆಸರಿನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ನಡೆಸಲ್ಪಡುವ ಮಖಾಂ ಉರೂಸ್ ಇದೇ ಬರುವ ಜನವರಿ 30 ರಿಂದ ಫೆಬ್ರವರಿ 4 ತಾರೀಖಿನವರೆಗೆ ನಡೆಯಲಿದೆ.

ಅದಕ್ಕಾಗಿ ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾಮಸ್ಜಿದ್ ವಠಾರದಲ್ಲಿ ನೆರೆಯ ನೆಕ್ಕಿಲ-ಪಂಜ,ಕಜೆ- ನಿಂತಿಕಲ್ಲು,ಕರಿಂಬಿಲ,ಇಂದ್ರಾಜೆ,ಅಲೆಕ್ಕಾಡಿ ಜಮಾಅತರ ಸಹಕಾರದೊಂದಿಗೆ ಸರ್ವ ರೀತಿಯ ತಯಾರಿ ನಡೆಯುತ್ತಿವೆ.

ಹಲವಾರು ಸಾದಾತುಗಳು,ಉಲಮಾ,ಉಮರಾ ನೇತಾರರು ಬಾಗವಹಿಸುವ ಈ ಸಂಭ್ರಮಕ್ಕೆ ಸರ್ವರಿಗೂ ಆದರ ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇವೆ.
_______
✍️ಹೈದರ್ ಆಲಿ ಐವತ್ತೊಕ್ಲು

Leave a Reply

Your email address will not be published. Required fields are marked *

error: Content is protected !!