ಸೂರಿಕುಮೇರು: ಎಸ್ಸೆಸ್ಸೆಫ್, ಎಸ್‌ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಪದಾಧಿಕಾರಿಗಳ ಆಯ್ಕೆ
ಮಾಣಿ: ಕರ್ನಾಟಕ ಮುಸ್ಲಿಂ ಜಮಾಅತ್ ಕೆಎಂಜೆ, ಸುನ್ನೀ ಯುವಜನ ಸಂಘ ಎಸ್‌ವೈಎಸ್, ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಮತ್ತು ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಕೆಸಿಎಫ್ ಸಲೀಂ ಸೂರಿಕುಮೇರುರವರ ನಿವಾಸದಲ್ಲಿ ನಡೆಯಿತು.

ಅಕ್ಬರ್ ಅಲೀ ಸಅದಿ ಮೂಡಬಿದ್ರೆ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್‌ಗೆ ನೇತೃತ್ವ ನೀಡಿ ದುಆ ಮಾಡಿದರು, ಇಸಾಕ್ ಮಾಣಿ , ಅಜ್ಮಲ್ ಮಾಣಿ ಆಲಾಪನೆ ನಡೆಸಿದರು. ಬಳಿಕ ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಮಹಾಸಭೆ ಕರ್ನಾಟಕ ಮುಸ್ಲಿಂ ಜಮಾಅತ್ ರೂಪೀಕರಣ ನಡೆಯಿತು.

ಅದರಂತೆ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್‌ಗೆ ಅಧ್ಯಕ್ಷರಾಗಿ ಯೂಸುಫ್ ಮುಬಶ್ಶಿರ್ ಹಿಕಮಿ, ಕಾರ್ಯದರ್ಶಿಯಾಗಿ ಅಜ್ಮಲ್ ಮಾಣಿ, ಕೋಶಾಧಿಕಾರಿಯಾಗಿ ಝೈನುದ್ದೀನ್ ಸೂರಿಕುಮೇರು, ಉಪಾಧ್ಯಕ್ಷರಾಗಿ ಇಸಾಕ್ ಮಾಣಿ, ಜೊತೆ ಕಾರ್ಯದರ್ಶಿಗಳಾಗಿ ಅಝೀಂ ಸೂರಿಕುಮೇರು, ಇಮ್ರಾನ್ ಸೂರಿಕುಮೇರು,ಕ್ಯಾಂಪಸ್ ಸೆಕ್ರೆಟರಿಯಾಗಿ ಆಶಿಕ್ ಸೂರಿಕುಮೇರು ಆಯ್ಕೆಯಾದರು, ಎಸ್‌ವೈಎಸ್ ನಲ್ಲಿ ಅಧ್ಯಕ್ಷರಾಗಿ ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ, ಕಾರ್ಯದರ್ಶಿಯಾಗಿ ಸಲೀಂ ಮಾಣಿ, ಕೋಶಾಧಿಕಾರಿಯಾಗಿ ಹನೀಫ್ ಸಂಕ,ಉಪಾಧ್ಯಕ್ಷರಾಗಿ ಸಿನಾನ್ ಮದನಿ ಅಝ್‌ಹರಿ,ದಅ‌್‌ವಾ ಕಾರ್ಯದರ್ಶಿಯಾಗಿ ನಝೀರ್ ಅಹ್ಮದ್ ಅಮ್ಜದಿ,ಸಾಂತ್ವನ ಕಾರ್ಯದರ್ಶಿಯಾಗಿ ಫಾರೂಕ್ ಬದ್ರಿಯಾ ಗ್ರೌಂಡ್,ಆಯ್ಕೆಯಾದರು.

ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾಗಿ ಯೂಸುಫ್ ಹಾಜಿ ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಸೂರಿಕುಮೇರು, ಕೋಶಾಧಿಕಾರಿಯಾಗಿ ಇಬ್ರಾಹಿಂ ಮುಸ್ಲಿಯಾರ್ ಮಾಣಿ,ಉಪಾಧ್ಯಕ್ಷರುಗಳಾಗಿ ಹಸೈನಾರ್ ಹಾಜಿ ಸೂರಿಕುಮೇರು, ಹಂಝ ಸೂರಿಕುಮೇರು,ಜೊತೆ ಕಾರ್ಯದರ್ಶಿಗಳಾಗಿ ಸುಲೈಮಾನ್ ಸೂರಿಕುಮೇರು, ಅಶ್ರಫ್ ಸಖಾಫಿ ಸೂರಿಕುಮೇರು ಆಯ್ಕೆಯಾದರು.

ಚುನಾವಣಾ ಅಧಿಕಾರಿಗಳಾಗಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಹೈದರ್ ಸಖಾಫಿ ಶೇರಾ, ಹಬೀಬ್ ಶೇರಾ, ಉಸೈದ್ ಸಖಾಫಿ ಸೂರ್ಯ, ಖುಬೈಬ್ ಜೌಹರಿ ಸೂರ್ಯ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ,ಟೈಲರ್ ಹಸೈನ್ ಸೂರಿಕುಮೇರು, ಉಮ್ಮರ್ ಸೂರಿಕುಮೇರು, ಅಬ್ದುಲ್ ಖಾದರ್ ಬರಿಮಾರು, ಎಸ್ ಕೆ ಅಶ್ರಫ್ ಗಡಿಯಾರ ಮುಂತಾದವರು ಉಪಸ್ಥಿತರಿದ್ದರು. ಸಲೀಂ ಮಾಣಿ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.