ಕರಾವಳಿ

ಸುಳ್ಯ ಅನ್ಸಾರಿಯ ಎಜುಕೇಷನ್ ಸೆಂಟರ್ ಗೆ ಖ್ಯಾತ ವಾಗ್ಮಿ ನಿಕಿತ್ ರಾಜ್ ಮೌರ್ಯ, ಸಮಾಜ ಸೇವಕ ಇನಾಯತ್ ಆಲಿ ಭೇಟಿ

ಸುಳ್ಯ: ಸುಳ್ಯದಲ್ಲಿ ನಡೆದ ರಾಷ್ಟ್ರಧ್ವಜ ಗೌರವ ಯಾತ್ರೆ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಖ್ಯಾತ ವಾಗ್ಮಿ ನಿಕಿತ್ ರಾಜ್ ಮೌರ್ಯ ಹಾಗೂ ಮಂಗಳೂರು ಉದ್ಯಮಿ ಹಾಗೂ ಸಮಾಜ ಸೇವಕ ಇನಾಯತ್ ಆಲಿರವರು ಜಟ್ಟಿಪಳ್ಳ ಅನ್ಸಾರಿಯಾ ಎಜುಕೇಷನ್ ಸೆಂಟರ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ನೂತನ ವಾಗಿ ನಿರ್ಮಾಣಗೊಂಡಿರುವ ಗಲ್ಫ್ ಆಡಿಟೋರಿಯಂ ಕಟ್ಟಡ ವೀಕ್ಷಣೆ ನಡೆಸಿದರು.

ಸಂಸ್ಥೆಗೆ ಭೇಟಿ ನೀಡಿದ ಅತಿಥಿಗಳನ್ನು ಅನ್ಸಾರಿಯಾ ಸೆಂಟರ್ ನ ವಿದ್ಯಾರ್ಥಿಗಳು ಬಹಳ ಗೌರವದಿಂದ ಬರ ಮಾಡಿಕೊಂಡರು. ಸಂಸ್ಥೆಯ ಕಚೇರಿಯಲ್ಲಿ ಸಭೆ ನಡೆದು ಈ ಸಂಧರ್ಭ ನಿಕಿತ್ ರಾಜ್ ಮೌರ್ಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು. ಅನ್ಸಾರಿಯ ಸಂಸ್ಥೆಯ ವಿದ್ಯಾರ್ಥಿಗಳು ಗುರು ವಿದ್ಯೆಯೊಂದಿಗೆ ಲೌಖಿಕ ವಿದ್ಯಾಭ್ಯಾಸ ಮಾಡುವ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಮುತಅಲ್ಲಿಮ್ ವಿದ್ಯಾರ್ಥಿಗಳೊಂದಿಗೆ ಸಂತೋಷದಿಂದ ಬೆರೆತು ಖುಷಿ ಪಟ್ಟರು.

ಸಮಾಜ ಸೇವಕ ಇನಾಯತ್ ಆಲಿಯವರು ಮಾತನಾಡಿ ಸಂಸ್ಥೆಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು.ಸಂಸ್ಥೆ ವತಿಯಿಂದ ಅತಿಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯಧರ್ಶಿ ಲತೀಫ್ ಹರ್ಲಡ್ಕ, ಕಟ್ಟಡ ಸಮಿತಿ ಅಧ್ಯಕ್ಷ ಅಬ್ದುಲ್ ಕಾದರ್ ಪಟೇಲ್, ಕೋಶಾಧಿಕಾರಿ ಎಸ್ ಎಂ ಹಮೀದ್,ಗಲ್ಫ್ ಸಮಿತಿ ಉಪಾಧ್ಯಕ್ಷ ಮುನೀರ್ ಜಟ್ಟಿಪಳ್ಳ, ಬೆಂಗಳೂರು ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಮುಖಂಡರುಗಳಾದ ಪಿ ಎ ಮಹಮ್ಮದ್, ಅದಂ ಹಾಜಿ ಕಮ್ಮಾಡಿ,ಮಹಮ್ಮದ್ ಇಕ್ಬಾಲ್ ಎಲಿಮಲೆ, ಶಾಫಿ ಕುತ್ತಮೊಟ್ಟೆ, ಹಾಜಿ ಅಬ್ದುಲ್ ಶುಕೂರು,ಕೆ ಬಿ ಇಬ್ರಾಹಿಂ,ಸಿದ್ದಿಕ್ ಕಟ್ಟೆಕ್ಕಾರ್ಸ್,ನಗರ ಪಂಚಾಯತ್ ಸದಸ್ಯರುಗಳಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ನಾಮ ನಿರ್ದೇಶಕ ಸದಸ್ಯರು ಗಳಾದ ಸಿದ್ದಿಕ್ ಕೊಕ್ಕೊ, ರಾಜು ಪಂಡಿತ್,ಮಾಜಿ ಸದಸ್ಯ ಕೆ ಗೋಕುಲ್ ದಾಸ್, ಲಕ್ಷ್ಮಿಶ್ ಗಬಲಡ್ಕ, ಕೆ ಟಿ ಭಾಗೀಶ್ ಸುದ್ದಿ, ಉದ್ಯಮಿ ಫೈಝಲ್ ಕಟ್ಟೆಕ್ಕಾರ್ಸ್ ಮೊದಲಾದವರು ಉಪಸ್ಥಿತರಿದ್ದರು.

ಹಾಜಿ ಕೆ ಎಂ ಮುಸ್ತಫಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ನೂತನವಾಗಿ ನಿರ್ಮಾಣ ಗೊಂಡಿರುವ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ವೀಕ್ಷಣೆ ನಡೆಸಿದ ಅತಿಥಿಗಳು ಕಟ್ಟಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದರ ಯಶಸ್ವಿಗಾಗಿ ಶುಭಕೋರಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರು ಹಾಗೂ ಅತಿಥಿಗಳಿಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕರವರ ನಿವಾಸದಲ್ಲಿ ಲಘು ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!