ಸುಳ್ಯ: ನಾಪತ್ತೆಯಾಗಿದ್ದ ನವವಿವಾಹಿತೆ ಸುಳ್ಯ ಠಾಣೆಗೆ ಹಾಜರು
ಕಳೆದ ಎರಡು ದಿನಗಳ ಹಿಂದೆ ಔಷಧಿಗೆಂದು ಕ್ಲಿನಿಕ್ಕಿಗೆ ಹೋಗಿ ನಾಪತ್ತೆಯಾಗಿದ್ದ ನವವಿವಾಹಿತೆ ಕೀರ್ತಿಶ್ರೀ ಸುಳ್ಯ ಠಾಣೆಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ.

ಕೀರ್ತಿಶ್ರೀ ಕಾಣೆಯಾಗಿರುವುದಾಗಿ ಆಕೆಯ ಪತಿ ಜ. 22ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಮಾಧ್ಯಮಗಳಲ್ಲೂ ವರದಿಯಾಗಿತ್ತು.
ನಿನ್ನೆ ರಾತ್ರಿ ಸುಳ್ಯ ಪೊಲೀಸ್ ಠಾಣೆಗೆ ಹಾಜರಾದ ಕೀರ್ತಿಶ್ರೀ ತನ್ನ ತಾಯಿಯ ಮನೆಗೆ ಹೋಗುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಮನೆಯವರನ್ನು ಕರೆಸಿ ಅವರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.