ಕರಾವಳಿಕ್ರೈಂ

ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯನ್ನು ಕೇರಳದಲ್ಲಿ ಪತ್ತೆ ಹಚ್ಚಿದ ಸುಳ್ಯ ಪೊಲೀಸರು



ಸುಳ್ಯ ಕೆವಿಜಿ ಬಳಿ ಫುಡ್ ಪಾಯಿಂಟ್ ನಲ್ಲಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ಬಂಟ್ವಾಳ ತಾಲೂಕಿನ ವಾಮಪದವು ನಿವಾಸಿ ನಾಗೇಶ್ (33 ವರ್ಷ) ಕ್ಯಾಂಟೀನ್ ನಲ್ಲಿ ಊಟ ಮುಗಿಸಿ ರೂಮಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮತ್ತೆ ಮರಳಿ ಬಾರದೆ ಇದ್ದು ನಾಪತ್ತೆಯಾಗಿರುವುದಾಗಿ ಕಳೆದ ಒಂದು ತಿಂಗಳ ಹಿಂದೆ ಆತನ ಪತ್ನಿ ಗೀತಾ ಎಂಬುವವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.


ಡಿಸೆಂಬರ್ 18ರಂದು ಸಂಜೆ 5:30 ಕ್ಕೆ ಅವರು ತಂಗಿದ್ದ ರೂಮಿನಿಂದ ಪೇಟೆಗೆ ಹೋದವರು ಮರಳಿ ಬಾರದೆ ಕಾಣೆಯಾಗಿದ್ದರು. ಸಂಬಂಧಪಟ್ಟವರಲ್ಲಿ ಮತ್ತು ಕುಟುಂಬಸ್ಥರಿಗೆ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ.


ಇದರಿಂದ ನನ್ನ ಪತಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ದೂರು ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಪ್ರಾರಂಭಿಸಿ ಕಳೆದ ಎರಡು ದಿನಗಳ ಹಿಂದೆ ಆತ ಕಾಸರಗೋಡು ಸೀತಾಂಗೊಳ್ಳಿ ಪರಿಸರದಲ್ಲಿ ತೋಟ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿ ಆತನನ್ನು ಸುಳ್ಯ ಠಾಣೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಆತನ ಮನೆಯವರನ್ನು ಕರೆಸಿ ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!