ಈಶ್ವರಮಂಗಲ ಅಬ್ಕೋ ಗೋಲ್ಡ್ ಮಳಿಗೆಯಲ್ಲಿ
ಅದೃಷ್ಟ ಡ್ರಾ ವಿಜೇತರಿಗೆ ಬಹುಮಾನ ವಿತರಣೆ
ಪುತ್ತೂರು: ಈಶ್ವರಮಂಗಲದ ಅಬ್ಕೋ ಗೋಲ್ಡ್ ಚಿನ್ನದ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ಏರ್ಪಡಿಸಿದ್ದ ‘ಎವ್ವೆರಿ ಪರ್ಚೇಸ್ ಕೂಪನ್’ ಇದರ ಲಕ್ಕಿ ಡ್ರಾ ಜ.5ರಂದು ಮಳಿಗೆಯಲ್ಲಿ ನಡೆಯಿತು.
ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ನೇತೃತ್ವದಲ್ಲಿ ಡ್ರಾ ನಡೆಸಲಾಯಿತು.
ಪ್ರಥಮ ಬಹುಮಾನ ವಿಜೇತರಾದ ದಯಾನಂದ ಮಯ್ಯಳರವರು ಅವರು ರೆಫ್ರಿಜರೇಟರ್ ಪಡೆದುಕೊಂಡರು. ದ್ವಿತೀಯ ಬಹುಮಾನ ವಿಜೇತರಾದ ಝಕಿಯಾ ದೇಲಂಪಾಡಿಯವರು ವಾಷಿಂಗ್ ಮೆಷಿನ್ ಹಾಗೂ ತೃತೀಯ ಬಹುಮಾನ ವಿಜೇತರಾದ ಹನೀಫ್ ಪಂಚೋಡಿಯವರು ಎಲ್.ಇ.ಡಿ ಟಿ.ವಿ ಪಡೆದುಕೊಂಡು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು.
ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಅಬ್ಕೋ ಗೋಲ್ಡ್ ಗುಣಮಟ್ಟದ ಸೇವೆಯ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದು ಮುಂದಕ್ಕೆ ಸಂಸ್ಥೆ ಯಶಸ್ಸಿನ ಉತ್ತುಂಗಕ್ಕೇರುವಂತಾಗಲಿ ಎಂದು ಹಾರೈಸಿದರು.
ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ, ಅಬ್ದುಲ್ಲ ಹಾಜಿ ಈಶ್ವರಮಂಗಲ, ನಿರಂಜನ್ ರೈ ಸಾಂತ್ಯ, ಅಬ್ದುಲ್ ಅಝೀಝ್ ಮಿಸ್ಬಾಹಿ, ಅಬ್ದುಲ್ ಖಾದರ್ ಹಾಜಿ, ಭವ್ಯ ಸಂಜೀವ ರೈ ಬಸಿರಡ್ಕ, ಅರಫಾಝ್, ಹಸೈನಾರ್ ಪಡ್ಪು, ಬಶೀರ್ ಮೇನಾಲ, ಸೀತಾರಾಮ ರೈ ಹಾಗೂ ಅಬ್ಕೋ ಗೋಲ್ಡ್‌ನ ಪಾಲುದಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.