ಕರಾವಳಿ

ಸುಳ್ಯ: ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪಿಕಪ್-ಮೂವರಿಗೆ ಗಾಯ

ಸುಳ್ಯ: ಪೈಚಾರ್ ಜಂಕ್ಷನ್ ಬಳಿ ಆಟೋ ರಿಕ್ಷಾಗೆ ಪಿಕ್-ಅಪ್ ವಾಹನ ಡಿಕ್ಕಿ ಹೊಡೆದು ಹಿಟ್ & ರನ್ ಮಾಡಿದ ಘಟನೆ ಇಂದು ಸಂಜೆ ಸಂಭವಿಸಿದೆ.

ಬೆಳ್ಳಾರೆ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಆಟೋ ರಿಕ್ಷಾಗೆ ಮುಂಭಾಗದಿಂದ ಬರುತ್ತಿದ್ದ ಪಿಕ್-ಅಪ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ಸಂಭವಿಸಿದ ಬಳಿಕ ಪಿಕ್-ಅಪ್ ಚಾಲಕ ವಾಹನ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.


ಘಟನೆಯಿಂದ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ಸಣ್ಣ ಮಗು ಸೇರಿ ಒಟ್ಟು ಮೂವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!