ತೋಟದಲ್ಲಿ ಕಟ್ಟಿ ಹಾಕಿದ ದನ ಕಾಣೆ- ಪೊಲೀಸ್ ದೂರು
ತೋಟದಲ್ಲಿ ಕಟ್ಟಿ ಹಾಕಿದ ದನ ಕಾಣೆಯಾದ ಬಗ್ಗೆ ದೂರು ನೀಡಲಾಗಿದೆ. ಬೆಳ್ತಂಗಡಿ ನಿವಾಸಿ ಶಿವಪ್ರಸಾದ್ ಎಂಬವರು ಮಾ. 25ರಂದು ಬೆಳಿಗ್ಗೆ ತನ್ನ ದನವನ್ನು ತನ್ನ ತೋಟದಲ್ಲಿ ಮೇಯಲೆಂದು ಕಟ್ಟಿ ಹಾಕಿದ್ದು, ಬಳಿಕ ಮದ್ಯಾಹ್ನ ತೋಟಕ್ಕೆ ಬಂದು ನೋಡುವಾಗ ದನವು ಕಟ್ಟಿ ಹಾಕಿದ್ದಲ್ಲಿ ಕಂಡು ಬಂದಿರುವುದಿಲ್ಲ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ದನವು ಎಲ್ಲೂ ಪತ್ತೆಯಾಗಿರುವುದಿಲ್ಲ. ಕಳವಾದ ದನದ ಮೌಲ್ಯ ರೂ 20,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿವಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.