ವಿಧಾನಸಭಾ ಚುನಾವಣೆ: ಎಸ್.ಡಿ.ಪಿ.ಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಸ್’ಡಿಪಿಐ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

224 ಪೈಕಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸುವ ಎಸ್’ಡಿಪಿಐ ಮೊದಲ ಹಂತದಲ್ಲಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಜೊತೆಗೆ ಮೊದಲ ಹಂತದಲ್ಲಿ 54 ಕ್ಷೇತ್ರಗಳ ಹೆಸರನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್’ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಮ್.ಕೆ ಪೈಝಿ ಅವರು, ಎಸ್’ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದರು.
ಎಸ್’ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಈ ಕೆಳಗಿನಂತಿದೆ.
ನರಸಿಂಹರಾಜ – ಅಬ್ದುಲ್ ಮಜೀದ್ ಮೈಸೂರು
ಪುಲಕೇಶಿ ನಗರ – ಬಿ.ಆರ್ ಭಾಸ್ಕರ್ ಪ್ರಸಾದ್
ಸರ್ವಜ್ಞ ನಗರ (ಬೆಂಗಳೂರು ) – ಅಬ್ದುಲ್ ಹನ್ನಾನ್
ಬಂಟ್ವಾಳ ( ದಕ್ಷಿಣ ಕನ್ನಡ) – ಇಲ್ಯಾಸ್ ಮಹಮ್ಮದ್ ತುಂಬೆ
ಮೂಡಬಿದಿರೆ ( ದಕ್ಷಿಣ ಕನ್ನಡ) – ಅಲ್ಫೋನ್ಸೋ ಫ್ರಾಂಕೋ
ಬೆಳ್ತಂಗಡಿ ( ದಕ್ಷಿಣ ಕನ್ನಡ) – ಅಕ್ಬರ್ ಬೆಳ್ತಂಗಡಿ
ಕಾಪು ( ಉಡುಪಿ ) – ಹನೀಫ್ ಮುಳೂರು
ದಾವಣಗೆರೆ ದಕ್ಷಿಣ ( ದಾವಣಗೆರೆ) – ಇಸ್ಮಾಯಿಲ್ ಝಬೀವುಲ್ಲಾ
ಚಿತ್ರದುರ್ಗ – ಬಾಳೆಕಾಯಿ ಶ್ರೀನಿವಾಸ್
ವಿಜಯನಗರ – ನಝೀರ್ ಖಾನ್