ಇದ್ರೀಷ್ ಪಾಷ ಕೊಲೆ ಪ್ರಕರಣದ ಆರೋಪಿಗಳ ಫೋಟೋ ಟ್ವೀಟ್ ಮಾಡಿ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆಗೈದ ಕಾಂಗ್ರೆಸ್

ಬೆಂಗಳೂರು: ಬಿಜೆಪಿ ನಾಯಕರ ಮಕ್ಕಳು ಏಕೆ ಗೋರಕ್ಷಣೆಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿ ಬಿಜೆಪಿಯನ್ನು ಕಟುವಾಗಿ ಟೀಕಿಸಿದೆ.
ಸಾತನೂರಿನಲ್ಲಿ ಇದ್ರೀಷ್ ಪಾಷ ಕೊಲೆ ಪ್ರಕರಣದ ಆರೋಪಿಗಳ ಫೋಟೋ ಟ್ವೀಟ್ ಮಾಡಿರುವ ಕಾಂಗ್ರೆಸ್
ಇದರಲ್ಲಿ ಯಾರಾದರೂ ಒಬ್ಬ ಬಿಜೆಪಿ ನಾಯಕರ ಮಕ್ಕಳಿದ್ದಾರಾ? ಬಿಜೆಪಿ ನಾಯಕರ ಮಕ್ಕಳು ಏಕೆ ಗೋರಕ್ಷಣೆಗೆ ಹೋಗುವುದಿಲ್ಲ? ಅವರಿಗೇಕೆ ಧರ್ಮ ರಕ್ಷಣೆಯ ಹೊಣೆ ಇಲ್ಲವೇ?‘ ಎಂದು ಪ್ರಶ್ನೆ ಮಾಡಿದೆ.
‘ತಮ್ಮ ಮಕ್ಕಳನ್ನು ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಕಳಿಸಿ, ಉದ್ಯಮಿಗಳನ್ನಾಗಿಸುವ ಬಿಜೆಪಿ ನಾಯಕರು ಇತರರ ಮಕ್ಕಳನ್ನು ಪ್ರಚೋದಿಸಿ ಜೈಲಿಗೆ ಕಳಿಸುತ್ತದೆ‘ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದೆ.