ಕರಾವಳಿ

ಸುಳ್ಯ ತಾಲೂಕು ಮದರಸ ಮ್ಯಾನೇಜ್ಮೆಂಟ್ ವತಿಯಿಂದ ನೌಶಾದ್ ಹಾಜಿ ಸೂರಲ್ಪಾಡಿ ಅನುಸ್ಮರಣೆ, ತಹ್ಲೀಲ್ ಸಮರ್ಪಣೆ

ಸುಳ್ಯ: ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಲಿದ ದ.ಕ. ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ನ ಅಧ್ಯಕ್ಷರಾಗಿದ್ದ ನೌಶಾದ್ ಹಾಜಿ ಸೂರಲ್ಪಾಡಿಯವರಿಗೆ ಸುಳ್ಯ ತಾಲೂಕು ಮದರಸ ಮ್ಯಾನೇಜ್ಮೆಂಟ್ ವತಿಯಿಂದ ತಹ್ ಲೀಲ್ ಸಮರ್ಪಣೆ ಹಾಗೂ ಅನುಸ್ಮರಣೆ ಕಾರ್ಯಕ್ರಮವು ಜ.2ರಂದು ಸುಳ್ಯ ಸುನ್ನಿಮಹಲ್ ನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ ವಹಿಸಿದ್ದರು. ದುವಾ ಮಜಿಲಿಸ್ನ ನೇತ್ರತ್ವವನ್ನು ಐವರ್ನಾಡು ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಖಾದರ್ ಪೈಝಿ ವಹಿಸಿದ್ದರು.

ಅನುಸ್ಮರಣಾ ಭಾಷಣವನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ನೌಶಾದ್ ಹಾಜಿ ಸೂರಲ್ಪಾಡಿಯವರನ್ನು ನಾನು ಬಾಲ್ಯದಿಂದಲೇ ಬಲ್ಲವನು ತನ್ನ ಸ್ವಂತಃ ದುಡಿಮೆಯಿಂದಲೆ ಮೇಲೆ ಬಂದವರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು ಧಾರ್ಮಿಕ ಮತ್ತು ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡು ಅದೆಷ್ಟೋ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಆಸರೆಯಾಗಿದ್ದವರು. ಅವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್, ಸಮಸ್ತ ನೇತಾರ ಇಭ್ರಾಹಿಂ ಹಾಜಿ ಕತ್ತರ್ ಮೃತರ ಬಗ್ಗೆ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ನ ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ತಾಲೂಕು ಮದರಸ ಮ್ಯಾನೇಜ್ಮೆಂಟ್ ನ ಕೋಶಾಧಿಕಾರಿ ಹಮೀದ್ ಹಾಜಿ ಸುಳ್ಯ, ಬೆಳ್ಳಾರೆ ಸಂಶುಲ್ ಉಲಾಮ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ಮಂಗಳ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಗಾಂಧಿನಗರ ಜುಮ ಮಸೀದಿ ಮಾಜಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ, ಹಾಜಿ ಅಹಮ್ಮದ್ ಸುಪ್ರೀಮ್, ಹಾಜಿ ಉಮ್ಮರ್ ಕಟ್ಟೆಕಾರ್, ಹಾಜಿ ಅಹಮ್ಮದ್ ಪಾರೆ, ಅಕ್ಬರ್ ಕರಾವಳಿ, ಅಹಮ್ಮದ್ ಕರಾವಳಿ ಕಲ್ಲುಗುಂಡಿ, ಅಮೀರ್ ಕುಕ್ಕುಂಬಳ, ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಅಬ್ದುಲ್ ರಹಿಮಾನ್ ಹಾಜಿ ಅಝಾದ್, ರಜಾಕ್ ಹಾಜಿ ರಾಜಧಾನಿ, ಆಶಿಕ್ ಸುಳ್ಯ, ಪುತ್ತುಚ್ಚ ಸುಳ್ಯ ಅಬೂಬಕ್ಕರ್ ಬನ್ನೂರು, ಇಬ್ರಾಹಿಂ ನಿಡುಬೆ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಮದರಸ ಮ್ಯಾನೇಜ್ಮೆಂಟ್ ನ ಪ್ರಧಾನ ಕಾರ್ಯದರ್ಶಿ ಯು.ಬಿ ಬಶೀರ್ ಬೆಳ್ಳಾರೆ ಸ್ವಾಗತಿಸಿ ವಂಧಿಸಿದರು.

Leave a Reply

Your email address will not be published. Required fields are marked *

error: Content is protected !!