ಪುತ್ತೂರು ಸರಕಾರಿ ಆಸ್ಪತ್ರೆಗೆ ಶಾಸಕ ಅಶೋಕ್ ರೈ ಭೇಟಿ; ಆಸ್ಪತ್ರೆಯ ಹೊರಾಂಗಣದಲ್ಲಿದ್ದ ಸಾರ್ವಜನಿಕರನ್ನು ಮಾತನಾಡಿಸಿ ಮಾಹಿತಿ ಪಡೆದುಕೊಂಡ ಶಾಸಕರು
ಪುತ್ತೂರು ಸರಕಾರಿ ಆಸ್ಪತ್ರೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿದರು. ಶಾಸಕರು ಹೊರಾಂಗಣದಲ್ಲಿ ಕುಳಿತಿದ್ದ ಸಾರ್ವಜನಿಕರಲ್ಲಿ ಮಾತನಾಡಿಸಿದರು. ವೈದ್ಯರನ್ನು ಕಾಯುತ್ತಿದ್ದೀರೋ ಎಂದು ಕೇಳಿದರು. ಅಲ್ಲಿದ್ದವರಿಂದ ಸರಕಾರಿ ಆಸ್ಪತ್ರೆಯ ಸೇವೆಯ ಬಗ್ಗೆಯೂ ತಿಳಿದುಕೊಂಡರು.

ಶಾಸಕರು ತಮ್ಮ ಬಳಿ ಬಂದು ಏನು ಬಂದಿದ್ದೀರಿ ಎಂದು ಕೇಳಿದ್ದು ನಮಗೆ ತುಂಬಾ ಸಂತೋಷವಾಯಿತು. ಬಡವರ ಮೇಲೆ ಅವರ ಪ್ರೀತಿಯನ್ನು ಇದು ಎತ್ತಿ ಹಿಡಿಯಿತು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.