ನೌಶಾದ್ ಹಾಜಿ ಸೂರಲ್ಪಾಡಿ ನಿಧನಕ್ಕೆ ಸಿ.ಆರ್.ಡಿ.ಎಫ್ ಸಂತಾಪ
ನೌಶಾದ್ ಹಾಜಿ ಸೂರಲ್ಪಾಡಿಯವರ ಸಂಪಾದನೆ ಏನು ಎಂದು ಅವರು ಮರಣಿಸಿದಾಗ ಸೇರಿದ ಜನ ಸಮೂಹದಿಂದ ಅರ್ಥವಾಗುತ್ತದೆ. ತಳಮಟ್ಟದಲ್ಲಿ ಸಮಾಜದ ಕಣ್ಣೀರು ಒರೆಸುವ ವ್ಯಕ್ತಿತ್ವವನ್ನು ಜನರು ಹೇಗೆ ಪ್ರೀತಿಸುತ್ತಾರೆ ಎನ್ನುವುದಕ್ಕೆ ನಿನ್ನೆಯ ದುಃಖದ ವಾತಾವರಣವೇ ಸಾಕ್ಷಿ ಎಂದು ಕಮ್ಯೂನಿಟಿ ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ಅವರು ಸಿ.ಆರ್.ಡಿ.ಎಫ್ ನ ಸಂತಾಪ ಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ
ಹಿರಿಯರಾಗಿರಲಿ, ಕಿರಿಯರಾಗಿರಲಿ ನೌಶಾದ್ ಹಾಜಿಯವರು ಎಲ್ಲರನ್ನೂ ‘ನೀವು’ ಎಂದೇ ಸಂಬೋಧಿಸುತ್ತಿದ್ದರು. ಪ್ರತಿಯೊಬ್ಬರಲ್ಲೂ ನಗುಮುಖದಲ್ಲೇ ಮಾತನಾಡುತ್ತಿದ್ದರು. ಆಲಿಮ್ ಗಳಲ್ಲಿ ಅವರಿಗಿದ್ದ ಪ್ರೀತಿ ಅಳತೆ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಶಾಂತ ಸ್ವಭಾವ ಮತ್ತು ಸಜ್ಜನ ವ್ಯಕ್ತಿ ನೌಶಾದ್ ಹಾಜಿಯವರ ಪಾಪಗಳನ್ನು ಅಲ್ಲಾಹನು ಕ್ಷಮಿಸಲಿ, ಸತ್ಕರ್ಮಗಳನ್ನು ಸ್ವೀಕರಿಸಲಿ. ಅವರ ಪತ್ನಿ ಮಕ್ಕಳ ಮೇಲೂ ಅಲ್ಲಾಹನ ಕೃಪೆ -ಅನುಗ್ರಹ ಇರಲಿ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನಮಗೆಲ್ಲರಿಗೂ ಅಲ್ಲಾಹನು ನೀಡಲಿ ಆಮೀನ್ ಎಂದು ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ತನ್ನ ಸಂತಾಪ ವ್ಯಕ್ತಪಡಿಸಿದೆ.