ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಮರ್‌ಹೂಂ ಕೂರತ್ ತಂಙಳ್ ಅನುಸ್ಮರಣೆ
ಪುತ್ತೂರು: ಮರ್ಕಝುಲ್ ಹುದಾ ಸಂಸ್ಥೆಯ ನಿರ್ದೇಶಕರಾಗಿದ್ದು ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದ ಖ್ಯಾತ ವಿದ್ವಾಂಸ ಮರ್‌ಹೂಂ ಕೂರತ್ ತಂಙಳ್‌ರವರ ಅನುಸ್ಮರಣೆ ಮತ್ತು ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಕುಂಬ್ರ ಮರ್ಕಝುಲ್ ಹುದಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಡಾ. ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಮಾತನಾಡಿ ಜಾತಿ, ಮತ ಬೇಧವಿಲ್ಲದೆ ಸರ್ವರಿಗೂ ಅಭಯ ಹಸ್ತರಾಗಿದ್ದ ತಂಙಳ್ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು. ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ದುವಾ ನೆರವೇರಿಸಿದರು.ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಮರ್ಕಝುಲ್ ಹುದಾ ಅನಿವಾಸಿ ಪ್ರಮುಖರಾದ ಅಬ್ದುಲ್ ರಝಾಕ್ ಬುಸ್ತಾನಿ, ಶರೀಅತ್ ವಿಭಾಗದ ಮುದರ್ರಿಸ್ ಹನೀಫ್ ಖಾಮಿಲ್ ಸಖಾಫಿ, ಮರ್ಕಝ್ ಸದಸ್ಯರಾದ ಅನ್ವರ್ ಹುಸೇನ್ ಗೂಡಿನಬಳಿ, ಕರೀಂ ಹಾಜಿ ಕಾವೇರಿ, ಪದವಿ ವಿಭಾಗದ ಶರೀಅತ್ ಮುದರ್ರಿಸ್ ಸ್ವಾಲಿಹ್ ಹನೀಫಿ, ಮುಹಮ್ಮದ್ ಕುಂಞಿ ಕುಂಬ್ರ, ಜಲೀಲ್ ಹಾಜಿ, ಇಬ್ರಾಹಿಂ ಬಾತಿಷ ಝುಹ್ರಿ, ತಖಿಯ್ಯ್ ಮದನಿ ಉಪಸ್ಥಿತರಿದ್ದರು.