ಕರಾವಳಿ

ಮಂಗಳೂರು: ಸಾಮಾಜಿಕ ಮುಂದಾಳು ನೌಷಾದ್ ಹಾಜಿ ಅಂತಿಮ ದರ್ಶನ | ಜಾತಿ, ಧರ್ಮ ಮರೆತು ಬಂದ ಜನ ಸಾಗರ

ಮಂಗಳೂರು: ಜಿಲ್ಲೆಯಲ್ಲಿ ತನ್ನ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಸಾಮಾಜಿಕ, ಧಾರ್ಮಿಕ ಮುಂದಾಳು ನೌಷಾದ್ ಹಾಜಿ ಸೂರಲ್ಪಾಡಿ ಅವರ ಅಂತಿಮ ದರ್ಶನಕ್ಕೆ ಜಾತಿ, ಧರ್ಮ ಮರೆತು ಜನರು ಸಹಸ್ರಾರು ಆಗಮಿಸಿದ್ದು, ಸೂರಲ್ಪಾಡಿ ಮಸೀದಿ ವಠಾರ ಜನಸಾಗರದಿಂದ ತುಂಬಿ ಹೋಗಿತ್ತು.

ಜಿಲ್ಲೆಯ ಮುಸ್ಲಿಂ ಸಮುದಾಯದವರಿಗೆ ಮಾತ್ರವಲ್ಲದೇ, ಇತರ ಸಮುದಾಯದ ಜನರ ನೆರವಿಗೆ ಧಾವಿಸುತ್ತಿದ್ದ ನೌಷಾದ್ ಹಾಜಿಯವರು, ಜ.1ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ವೇಣೂರಿನ ಸಮೀಪವಿರುವ ರನ್ನಾಡಿಪಲ್ಕೆ ಎಂಬಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು. ಘಟನೆಯಲ್ಲಿ ಇವರ ಚಾಲಕ ಮುಷರಫ್ ಕೂಡ ಮರಣ ಹೊಂದಿದ್ದರು.

ನೌಷಾದ್ ಹಾಜಿಯವರ ಮೃತದೇಹದ ಅಂತಿಮ ದರ್ಶನಕ್ಕೆ ಮೂಡಬದ್ರೆ-ಮಂಗಳೂರು ರಸ್ತೆಯಲ್ಲಿರುವ ಸೂರಲ್ಪಾಡಿಯ ಮಸೀದಿ ವಠಾರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅವರ ಅಂತಿಮ ದರ್ಶನಕ್ಕೆ ಜಿಲ್ಲೆಯ ಮೂಲೆಮೂಲೆಯಿಂದ ಸಹಸ್ರಾರು ಜನರು ಆಗಮಿಸಿದ್ದರಿಂದ, ಮಸೀದಿಯ ವಠಾರದಲ್ಲಿ ಜನಸಾಗರವೇ ಕಂಡು ಬಂತು.

ಸಮಾಜ ಸೇವೆಗಳಲ್ಲಿ ದ.ಕ ಜಿಲ್ಲೆಯ ಮನೆ ಮಾತಾಗಿದ್ದ ನೌಷಾದ್ ಹಾಜಿ, 30-35 ವರ್ಷಗಳಾದರೂ ಮದುವೆಯಾಗದ ಅದೆಷ್ಟೋ ಹೆಣ್ಣು ಮಕ್ಕಳ ಪಾಲಿಗೆ ಆಶ್ರಯವಾಗಿ ‘ನಂಡೆ ಪೆಂಙಳ್'(ನನ್ನ ಸಹೋದರಿ) ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ವಯಸ್ಸಿನ ಮಿತಿ ಕಳೆದ ಹಲವಾರು ಹೆಣ್ಣು ಮಕ್ಕಳನ್ನು ವಿವಾಹಕ್ಕೆ ನೆರವಾಗಿದ್ದರು.

Leave a Reply

Your email address will not be published. Required fields are marked *

error: Content is protected !!