ಸುಳ್ಯ ಮತ್ತು ಕಡಬ ಕಾಂಗ್ರೆಸ್ ಮುಖಂಡರಿಂದ ಕೆಪಿಸಿಸಿ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಭೇಟಿ
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಬಳಿಕ ನಡೆದ ಬೆಳವಣಿಗೆಯಲ್ಲಿ ಸುಳ್ಯ ಮತ್ತು ಕಡಬದ ಪ್ರಮುಖ ನಾಯಕರುಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಮಾನತು ಮತ್ತು ಶೋಕಾಸ್ ನೋಟೀಸ್ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಶೋಕಾಸ್ ಮತ್ತು ಅಮಾನತು ಆದೇಶ ಬಂದಂತಹ ಕೆಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಶಿಸ್ತು ಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ರವರನ್ನು ಭೇಟಿ ಮಾಡಿರುವುದಾಗಿ ತಿಳಿದು ಬಂದಿದೆ.

ಶಿಸ್ತು ಕ್ರಮದ ವಿಚಾರದ ಬಗ್ಗೆ ವಿವರಣೆ ನೀಡಿದ ಕೆಪಿಸಿಸಿ ಶಿಸ್ತುಪಾಲನ ಸಮಿತಿಯ ಅಧ್ಯಕ್ಷ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ರವರು ಸುಳ್ಯದ ನಾಯಕರ ವಿರುದ್ಧ ನೀಡಿರುವ ಶೋಕಾಸ್ ನೋಟೀಸ್ ಮತ್ತು ಉಚ್ಚಾಟನೆಯ ಆದೇಶ ತಪ್ಪಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷರು ಸಹ ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಒಂದು ವಾರದ ಒಳಗೆ ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿ ಆದೇಶವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಸಂಯೋಜಕರಾದ ಹೆಚ್ ಎಂ ನಂದಕುಮಾರ್, ಮಾಜಿ ಕೆಪಿಸಿಸಿ ಸದಸ್ಯ,ಡಾ. ರಘು,ಮುಖಂಡರುಗಳಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕೆ ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಉಷಾ ಅಂಚನ್, ಆಶಾ ಲಕ್ಷ್ಮಣ್, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ಚೇತನ್ ಕಜೆಗದ್ದೆ, ಸುಧೀರ್ ದೇವಾಡಿಗ, ಫೈಜಲ್ ಕಡಬ, ಶಹೀದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.