Uncategorized

‘ಕಿರಿಕ್ ಪಾರ್ಟಿ’ ಸಿನಿಮಾಕ್ಕೆ 6 ವರ್ಷ: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವಿನ ಕೋಲ್ಡ್ ವಾರ್!

ಮಂಗಳೂರು: ‘ಕಿರಿಕ್ ಪಾರ್ಟಿ’ ಸಿನಿಮಾ 6 ವರ್ಷ ಪೂರೈಸಿದ ಸಂತೋಷವನ್ನು ಸಂಭ್ರಮಿಸುತ್ತಿರುವ ಸಮಯದಲ್ಲಿ ರಶ್ಮಿಕಾ ಹೆಸರನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವಿನ ಕೋಲ್ಡ್ ವಾರ್ ಮುಂದುವರೆಯುತ್ತಿರುವುದು ಕಾಣಿಸುತ್ತಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಪಾರ್ಟಿಯ ಸಕ್ಸಸ್ ನೆನೆದ ರಿಷಬ್ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ಆದರೆ ರಶ್ಮಿಕಾ ಹೆಸರನ್ನು ಎಲ್ಲಿಯೂ ಹೇಳಲಿಲ್ಲ. ಒಂದಿಷ್ಟು ಪೋಸ್ಟರ್ ಶೇರ್ ಮಾಡಿ ಈ ಸಂಭ್ರಮದ ಭಾಗವಾಗಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.

ಜೊತೆಗೆ ಸಿನಿಮಾತಂಡದ ಕೆಲವು ಮಂದಿಗೆ ಟ್ಯಾಗ್ ಮಾಡಿದ್ದರು. ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಪರಮ್‌ವಾ ಸ್ಟುಡಿಯೋಗೆ ಟ್ಯಾಗ್ ಮಾಡಿದ್ದರು. ಆದರೆ ರಶ್ಮಿಕಾ ಹೆಸರನ್ನು ಎಲ್ಲಿಯೂ ಹೇಳಿಲ್ಲ. ರಷಬ್ ಹಂಚಿಕೊಂಡ ಪೋಸ್ಟ್ ಅನ್ನೇ ವರಮ್‌ವಾ ಸ್ಟುಡಿಯೋ ಕೂಡ ಶೇರ್ ಮಾಡಿತ್ತು. ರಶ್ಮಿಕಾ ಹೆಸರು ಕೈ ಬಿಡುವ ಮೂಲಕ ಮುನಿಸು ಇನ್ನೂ ಮುಂದುವರೆದೆ ಎನ್ನುವುದನ್ನು ರಿಷಬ್ ಪರೋಕ್ಷವಾಗಿ ಹೇಳಿದ್ದಾರೆ.

ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೆಸರು ಹೇಳದೆ ಕೇವಲ ಸನ್ನೆ ಮೂಲಕ ಮಾತನಾಡಿದ್ದರು. ರಶ್ಮಿಕಾ ಅವರ ಸನ್ನೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೇ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು.

ತನ್ನ ಚಿತ್ರರಂಗಕ್ಕೆ ಪರಿಚಯಿಸಿದ ಸಂಸ್ಥೆಗೆ ಅವಮಾನ ಮಾಡಿದ್ದಾರೆ ಎಂದು ಕನ್ನಡ ಅಭಿಮಾನಿಗಳು ರಶ್ಮಿಕಾ ವಿರುದ್ಧ ರೊಚ್ಚಿಗೆದ್ದಿದ್ದರು.

ಈ ಘಟನೆ ಬಳಿಕ ರಿಷಬ್ ಶೆಟ್ಟಿ ಕೂಡ ರಶ್ಮಿಕಾ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿ ಖಡಕ್ ತಿರುಗೇಟು ನೀಡಿದ್ದರು. ಇಬ್ಬರ ಕೋಲ್ಡ್ ವಾರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಂದಹಾಗೆ ಇಬ್ಬರ ಈ ಶೀತಲ ಸಮರ ಮುಂದುವರೆದಿದೆ.

ಅಂದಹಾಗೆ ರಶ್ಮಿಕಾ ಕೂಡ ಕಿರಿಕ್ ಪಾರ್ಟಿ 6 ವರ್ಷದ ಸಂಭ್ರಮವನ್ನು ನೆನಪಿಸಿಕೊಂಡಿದ್ದರು. ಮೊದಲ ಚಿತ್ರದ ಪೋಸ್ಟರ್ ಶೇರ್ ಮಾಡಿದ್ದರು. ಆದರೆ ಅವರೂ ಕೂಡ ಯಾರ ಹೆಸರನ್ನು ಟ್ಯಾಗ್ ಮಾಡಿರಲಿಲ್ಲ, ಯಾರನ್ನು ನೆನಪಿಸಿಕೊಂಡಿರಲಿಲ್ಲ. ಪೋಸ್ಟರ್ ಶೇರ್ ಮಾಡಿದ್ದರು ಅಷ್ಟೆ.

ಇದನ್ನು ಗಮನಿಸಿದ ಅಭಿಮಾನಿಗಳು ಇಬ್ಬರ ನಡುವೆ ಮುನಿಸು, ಕೋಲ್ಡ್ ವಾರ್ ಮುಂದುವರೆದಿದೆ ಎನ್ನುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!