ಉಪ್ಪಿನಂಗಡಿ: ಶಾಲಾ ವಾರ್ಷಿಕೋತ್ಸವಕ್ಕೆ ತೆರಳಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ತಡರಾತ್ರಿ ಕಾಡಿನಲ್ಲಿ ಬಿಟ್ಟು ಬಂದ ದುಷ್ಕರ್ಮಿ: ರಾತ್ರಿಯಿಡೀ ಕಾಡಿನಲ್ಲಿ ಕಾಲ ಕಳೆದ ಬಾಲಕಿ
ಉಪ್ಪಿನಂಗಡಿ;ಶಾಲಾ ವಾರ್ಷಿಕೋತ್ಸವ ವೀಕ್ಷಿಸಲು ತೆರಳಿದ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗುವ ನೆಪದಲ್ಲಿ
ಅತ್ಯಾಚಾರವೆಸಗಿದ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ನೆಲ್ಯಾಡಿ ಗ್ರಾಮದ ಪುಚ್ಚೇರಿ ಎಂಬಲ್ಲಿ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪೋಷಕರ ಜೊತೆ ತೆರಳಿದ್ದ ಬಾಲಕಿಯನ್ನು ರಾತ್ರಿ ಮನೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಚೇತನ್ ಎಂಬಾತ ಬೈಕ್‌ನಲ್ಲಿ ಕುಳ್ಳಿರಿಸಿ ಗುಡ್ಡವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದು, ಕೃತ್ಯವೆಸಗಿದ ಬಳಿಕ ಆಕೆಯನ್ನು ಮದ್ಯ ರಾತ್ರಿ ಕಾಡಿನಲ್ಲೇ ಬಿಟ್ಟು ಹೋಗಿರುತ್ತಾನೆ ಎಂದು ವರದಿಯಾಗಿದೆ.
ಬೆಳಗಾಗುವ ತನಕ ಗುಡ್ಡದಲ್ಲೇ ಇದ್ದ ಬಾಲಕಿಯನ್ನು ಹೆತ್ತವರು ಹುಡುಕಿ ವಿಚಾರಿಸಿದಾಗ ಕೃತ್ಯ ಬಯಲಾಗಿದೆ.ಬಾಲಕಿ ನೀಡಿದ ದೂರಿನಂತೆ ಪೋಕ್ಸೋ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.