ಹೆಂಡತಿ ಎದುರು ಅಂಕಲ್ ಎಂದು ಕರೆದ ಅಂಗಡಿಯವನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ.!
ಕೆಲವರಿಗೆ ಅಂಕಲ್ ಎಂದು ಕರೆದರೆ ಕೋಪ ಬರುವುದನ್ನು ಕೇಳಿದ್ದೇವೆ ಆದರೆ ಇಲ್ಲೊಬ್ಬ ಅಂಕಲ್ ಎಂದು ಕರೆದದ್ದಕ್ಕೆ ಥಳಿಸಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಜೊತೆ ಸೀರೆ ಖರೀದಿಸಿಲು ಹೋದ ಸಂದರ್ಭದಲ್ಲಿ ಬಟ್ಟೆ ಅಂಗಡಿಯವನು ಆತನನ್ನು ಅಂಕಲ್ ಎಂದು ಕರೆದದನೆಂದು ಆಕ್ರೋಶಗೊಂಡ ಆ ವ್ಯಕ್ತಿ, ಅಂಗಡಿಯವನಿಗೆ ತನ್ನ ಸ್ನೇಹಿತರ ಜೊತೆಗೂಡಿ ಹಿಗ್ಗಾಮುಗ್ಗಾ ಥಳಿಸಿದ್ದು ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ತನ್ನನ್ನು ತನ್ನ ಹೆಂಡತಿಯ ಮುಂದೆ ಬಟ್ಟೆ ಅಂಗಡಿಯವನು ಅಂಕಲ್ ಎಂದು ಕರೆದನೆಂದು ಕೋಪದಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ತನ್ನ ಹೆಂಡತಿಯ ಮುಂದೆಯೇ ನನ್ನನ್ನು ಅಂಕಲ್ ಎಂದು ಕರೆಯಲು ಆತನಿಗೆ ಎಷ್ಟು ಧೈರ್ಯ ಎಂದು ಕೋಪಗೊಂಡು ಸ್ವಲ್ಪ ಹೊತ್ತಿನ ಬಳಿಕ ತನ್ನ ಸ್ನೇಹಿತರನನ್ನು ಕರೆಸಿ ಬಟ್ಟೆ ಅಂಗಡಿಯವನನ್ನು ಹೊರಗೆ ಎಳೆದುಕೊಂಡು ಹೋಗಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ