ಕರಾವಳಿ

ಪುತ್ತೂರು: ಪ್ರಚೋದನಕಾರಿ ಬ್ಯಾನರ್‌ಗಳನ್ನು ತೆರವುಗೊಳಿಸಲು ಎಸ್‌ಡಿಪಿಐ ಆಗ್ರಹ



ಪುತ್ತೂರು: ದೆಹಲಿಯಲ್ಲಿ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಸಂಘಟನೆಗಳು ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪುತ್ತೂರು ಪೇಟೆಯಲ್ಲಿ ಮತ್ತು ತಾಲೂಕಿನ ಹಲವೆಡೆ ಪ್ರಚೋದನಕಾರಿ ಬ್ಯಾನರ್ ಗಳನ್ನು ಹಾಕುವುದರ ಮೂಲಕ ಗಲಭೆ ನಡೆಸಲು ಷಡ್ಯಂತರ ನಡೆಸುತ್ತಿದ್ದರು ಪೋಲಿಸ್ ಇಲಾಖೆ ಇದನ್ನು ಕಂಡು ಕಾಣದಂತೆ ವರ್ತಿಸಿ ಮೌನ ಸಮ್ಮತಿ ನೀಡುತ್ತಿರುವ ಕ್ರಮ ಖಂಡನೀಯವಾಗಿದೆ ಹಾಗೂ ಬ್ಯಾನರ್ ನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪುತ್ತೂರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಮುಸ್ಲಿಂ ನಾಮದಾರಿಯೊಬ್ಬ ನಡೆಸಿದ ಕೊಲೆಯನ್ನು ಯಾವುದೇ ಮುಸ್ಲಿಂ ಸಂಘಟನೆ ಗಳಾಗಲಿ ಅಥವಾ ವ್ಯಕ್ತಿಗಳಾಗಲಿ ಅದನ್ನು ಸಮರ್ಥಿಸಿಲ್ಲ ಬದಲಿಗೆ ಘಟನೆಯನ್ನು ಖಂಡಿಸಿ ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.


ಆ ಘಟನೆಯ ನಂತರ ಕೂಡ ಅಂತಹದೇ ಪ್ರಕರಣಗಳು ಇತರ ಸಮುದಾಯದ ನಾಮಧಾರಿಗಳಿಂದ ನಡೆದಿದೆ,ಇಂತಹ ಪೈಶಾಚಿಕ ಕೃತ್ಯಕ್ಕೆ ಧರ್ಮವಿಲ್ಲ ಎಂಬ ಅರಿವಿದ್ದರು ಒಂದು ಸಮುದಾಯದ ವಿರುದ್ಧ ದ್ವೇಷ ಸಾಧಿಸುವ ಮತ್ತು ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಭಾಗವಾಗಿ ಈ ರೀತಿಯ ಬ್ಯಾನರ್ ಗಳನ್ನು ಸಂಘಪರಿವಾರ ಅಲ್ಲಲ್ಲಿ ಹಾಕುತ್ತಿದೆ. ಇದನ್ನು ಪೊಲೀಸರು ಕೂಡಲೇ ತೆರವು ಮಾಡಬೇಕು ಎಂದು ಆಗ್ರಹಿಸಿರುವ ಅವರು

ಪ್ರಚೋದನಕಾರಿ ಬ್ಯಾನರ್ ಹಾಕಿದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!