ಸುಳ್ಯ:ಜವಾಬ್ದಾರಿ ಮೆರೆದ ಸುಳ್ಯ ನಗರಾಡಳಿತ: ನ.ಪಂ.ಅಧ್ಯಕ್ಷರ ನೇತೃತ್ವದಲ್ಲಿ ತಡರಾತ್ರಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು
ಸುಳ್ಯ: ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಸುಳ್ಯ ನಗರದ ರಥಬೀದಿ ಬಳಿಯಲ್ಲಿ ಒಡೆದು ಹೋಗಿರುವ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಕುರುಂಜಿಗುಡ್ಡೆ ಭಾಗದ ವಾರ್ಡ್ ಗಳಲ್ಲಿ ನೀರು ಸರಬರಾಜು ವ್ಯತ್ಯಯವಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಪೈಪ್ ಲೈನ್ ಸರಿ ಆಗದ ಕಾರಣ ಕಳೆದೆರಡು ದಿನಗಳಿಂದ ಕುರುಂಜಿಗುಡ್ಡೆ ಭಾಗದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು.

ಆದರೆ ಭಾನುವಾರದಂದು ಕಾರ್ಯಕ್ರಮಗಳು ಇರುವ ಕಾರಣ ನೀರಿಲ್ಲದೆ ಸಮಸ್ಯೆ ಎದುರಾಗಬಾರದೆಂಬ ದೃಷ್ಟಿಯಿಂದ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನೇತೃತ್ವದಲ್ಲಿ ತಡರಾತ್ರಿಯೂ ನೀರು ಸರಬರಾಜುಮಾಡಿ ಜವಾಬ್ದಾರಿಯನ್ನು ಮೆರೆದಿದ್ದಾರೆ.

ಇವರ ಈ ಕಾರ್ಯಕ್ಕೆ ಶ್ಲಾಘನೆ ವೆಕ್ತವಾಗಿದೆ.
ಇವರೊಂದಿಗೆ ನ.ಪಂ ಸಿಬ್ಬಂದಿ ಶ್ರೀಜಿತ್ ಬಿಜಿಲ, ಪೌರ ಸಿಬ್ಬಂದಿ ಗುರುನಾಥ, ಟ್ಯಾಂಕರ್ ಮಾಲಕ, ಚಾಲಕ ಅನಿಲ್ ಕುಮಾರ್, ನ.ಪಂ.ನಾಮ ನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ ನೀರು ಸರಬರಾಜಿನಲ್ಲಿ ಸಹಕರಿಸಿದ್ದಾರೆ.



