ತಿಂಗಳಾಡಿ ಮಸೀದಿಯ ಮಾಜಿ ಅಧ್ಯಕ್ಷ ಯೂಸುಫ್ ಹಾಜಿ ಕಣ್ಣೂರು ನಿಧನ
ಪುತ್ತೂರು: ತಿಂಗಳಾಡಿ ಮಸ್ಜಿದುಲ್ ಬಾರಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಉದ್ಯಮಿ ಯೂಸುಫ್ ಹಾಜಿ ಕಣ್ಣೂರು(65.ವ) ಎ.6ರಂದು ನಿಧನರಾಗಿದ್ದಾರೆ.

ಕುಂಬ್ರ ರೇಂಜ್ ಮ್ಯಾನೇಜ್ ಮೆಂಟ್ ಉಪಾಧ್ಯಕ್ಷರಾಗಿದ್ದ ಯೂಸುಫ್ ಹಾಜಿಯವರು ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದು ಈ ಹಿಂದೆ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.
ಮೃತರು ಪತ್ನಿ ರುಖಿಯ ಪುತ್ರರಾದ ಉದ್ಯಮಿ ಹಿದಾಯತ್ ಕಣ್ಣೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು, ಅತಾವುಲ್ಲಾ ಅಝ್ಹರಿ ಕಣ್ಣೂರು, ಅಮಾನುಲ್ಲಾ ಕಣ್ಣೂರು ಹಾಗೂ ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ನೂರಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.