ಕುಂಬ್ರ ಮರ್ಕಝುಲ್ ಹುದಾ ‘ಗಲ್ಫ್ ಕೌನ್ಸಿಲ್’ ಸಂಚಾಲಕರಾಗಿ ಬಶೀರ್ ಇಂದ್ರಾಜೆ ಆಯ್ಕೆ
ಪುತ್ತೂರ: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಭಿವೃದ್ಧಿಗಾಗಿ ಕಾರ್ಯಾಚರಿಸುವ ವಿವಿಧ ಗಲ್ಫ್ ಘಟಕಗಳನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ‘ಮರ್ಕಝುಲ್ ಹುದಾ ಗಲ್ಫ್ ಕೌನ್ಸಿಲ್’ ಕೋ ಆರ್ಡಿನೇಟರ್(ಸಂಚಾಲಕ)ಆಗಿ ಬಶೀರ್ ಇಂದ್ರಾಜೆ ಅವರನ್ನು ನೇಮಕ ಮಾಡಲಾಗಿದೆ.

ಸುದೀರ್ಘ ಕಾಲ ಸಂಸ್ಥೆಯ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ಕಾಲೇಜಿನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ನೇತೃತ್ವ ನೀಡಿರುವ ಬಶೀರ್ ಇಂದ್ರಾಜೆಯವರು ಊರಿನಲ್ಲಿಯೂ ಸಂಸ್ಥೆಯ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ದುಡಿದ ಅನುಭವ ಹೊಂದಿದ್ದಾರೆ.
ಸೌದಿ ಅರೇಬಿಯಾ, ಯುಎಇ, ಬಹರೈನ್, ಒಮಾನ್, ಖತರ್, ಕುವೈತ್ ಮುಂತಾದ ರಾಷ್ಟ್ರಗಳ ಮರ್ಕಝುಲ್ ಹುದಾ ಪೋಷಕ ಘಟಕಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜುಬೈಲ್‌ನಲ್ಲಿ ನಡೆದ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸಮಾವೇಶದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಈ ಆಯ್ಕೆಯನ್ನು ಘೋಷಿಸಿದರು.
ಬಶೀರ್ ಇಂದ್ರಾಜೆ ಅವರು ಮುಂದಿನ ದಿನಗಳಲ್ಲಿ ವಿವಿಧ ಅನಿವಾಸಿ ಘಟಕಗಳನ್ನು ಸಕ್ರಿಯಗೊಳಿಸುವ ಮತ್ತು ಅಲ್ಲಿನ ಕಾರ್ಯಯೋಜನೆಗಳನ್ನು ಸಿದ್ದಪಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿದ್ದು ಸದ್ಯ ಬಹರೈನ್ ಪ್ರವಾಸಲ್ಲಿದ್ದಾರೆ. ಎಲ್ಲ ಅನಿವಾಸಿ ಘಟಕಗಳು ಅವರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ‘ಮರ್ಕಝುಲ್ ಹುದಾ ಗಲ್ಫ್ ಕೌನ್ಸಿಲ್’ ವಿನಂತಿಸಿದೆ.