ಕರಾವಳಿ

ಬೆಳ್ಳಾರೆ: ಮೊಬೈಲ್ ಕರೆ ಮಾಡುವಂತೆ ವಿದ್ಯಾರ್ಥಿನಿಯನ್ನು ಪೀಡಿಸುತ್ತಿದ್ದ ಯುವಕ ಪೊಲೀಸ್ ವಶಕ್ಕೆ

ಬೆಳ್ಳಾರೆ : ಶಾಲೆಯಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಹಾಗೂ ವ್ಯಕ್ತಿ ರಾತ್ರಿ ವೇಳೆ ನಿನ್ನ ತಾಯಿಯ ಮೊಬೈಲ್ ನಿಂದ ಕರೆ ಮಾಡು ಎಂದು ವಿದ್ಯಾರ್ಥಿನಿಯ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಆರೋಪಿಯು ಆಕೆಯ ಜೊತೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ಮಾತನಾಡಿ ರಾತ್ರಿ ನಿನ್ನ ತಾಯಿಯ ಮೊಬೈಲ್‌ನಿಂದ ಕರೆ ಮಾಡಿ ನನ್ನೊಂದಿಗೆ ಮಾತನಾಡು ಎಂದು ಹೇಳುತ್ತಿದ್ದನು ಎನ್ನಲಾಗಿದೆ. ಈ ಬಗ್ಗೆ ಮನೆಗೆ ಬಂದು ವಿಷಯ ತಿಳಿಸಿದ ಬಾಲಕಿ ಭಯಗೊಂಡು ನಾನು ಶಾಲೆಗೆ ಹೋಗುವುದಿಲ್ಲ, ಅವನು ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಭಯಭೀತಳಾಗಿದ್ದಳು.

ಪದೇ ಪದೇ ಕರೆ ಮಾಡಲು ಒತ್ತಾಯಿಸಿದ್ದು, ಪೋಷಕರು ಅಶ್ರಫ್‌ಗೆ ಮೊಬೈಲ್‌ನಿಂದ ಕರೆ ಮಾಡಿಸಿದಾಗ ಮಗಳ ಜೊತೆ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದಾಗಿ ಬಾಲಕಿ ಸುಮಾರು 10 ದಿನಗಳಿಂದ ಶಾಲೆಗೆ ಹೋಗಲಿಲ್ಲ. ಆರೋಪಿಯು ಅಶ್ರಫ್ ಯಾನೆ ಅಚ್ಚಪು ಎಂದು ತಿಳಿದುಬಂದಿದೆ.



ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಶ್ರಫ್ ವಿರುದ್ಧ ಪೊಕ್ಸೋ ಪ್ರಕರಣವನ್ನು ದಾಖಲಿಸಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!