ಉಪ್ಪಿನಂಗಡಿ: ನಾಪತ್ತೆಯಾಗಿದ್ದ ಬಾರ್ಯದ ಯುವತಿ ಪತ್ತೆ
ಉಪ್ಪಿನಂಗಡಿ: ಕಳೆದ ಆದಿತ್ಯವಾರದಂದು ಮಧ್ಯ ರಾತ್ರಿ ನಾಪತ್ತೆಯಾಗಿದ್ದ ಬಾರ್ಯ ಗ್ರಾಮದ ಯುವತಿ ಸಾಹಿದಾ (19 ವ.) ಎಂಬಾಕೆಯನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.
ಮಂಗಳೂರು ತಾಲೂಕು ಮುಡಿಪು ಎಂಬಲ್ಲಿನ ಶಕೀನಾ ಎಂಬವರ ಮನೆಯಲ್ಲಿ ಇದ್ದ ಈಕೆಯನ್ನು ಉಪ್ಪಿನಂಗಡಿಯ ಮಹಿಳಾ, ಎಎಸೈ ಕವಿತಾರವರು ಪತ್ತೆ ಹಚ್ಚಿ ಆಕೆಯ ತಂದೆಯ ಜೊತೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆಕೆಯನ್ನು ಕರೆದುಕೊ೦ಡು ಹೋಗಿದ್ದನೆಂದು ಸಂಶಯಿಸಲಾದ ಮುದಾಸೀರ್ ಎಂಬಾತನಿಗೆ ಪೊಲೀಸ್ ಠಾಣೆಯ బಳಿ ಯುವತಿಯ ಕಡೆಯವರೆನ್ನಲಾದ ಗುಂಪೊಂದು ಹಲ್ಲೆಗೆ ಮುಂದಾಗಿ ಉದ್ವಿಗ್ನ ವಾತಾವರಣ ಉ೦ಟಾಗಿತ್ತಾದರೂ ಪೊಲೀಸರ ಸಕಾಲಿಕ ಕ್ರಮದಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು ಎಂದು ತಿಳಿದು ಬಂದಿದೆ.