ಅಂತಾರಾಷ್ಟ್ರೀಯಕರಾವಳಿ

ಪದ್ಮಶ್ರೀ ಹಾಜಬ್ಬರಿಗೆ ವಿಶೇಷ ಸತ್ಕಾರದೊಂದಿಗೆ ಆರ್ಥಿಕ ನೆರವು ನೀಡಿದ ಸಿ.ಆರ್.ಡಿ.ಎಫ್ ತಂಡದೇಶದ ಪ್ರತೀಯೊಬ್ಬ ಸಾಮಾನ್ಯ ಪ್ರಜೆಗೂ ಸ್ಪೂರ್ತಿ ಮತ್ತು ಕೀರ್ತಿಯಾಗಿರುವ ಹರೇಕಳ ಪದ್ಮಶ್ರೀ ಹಾಜಬ್ಬರವರು ಹಿದಾಯ ಫೌಂಡೇಶನ್ ನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೌದಿ ಜುಬೈಲ್ ಗೆ ಆಗಮಿಸಿ ಎಲ್ಲರಿಗೂ ವಿಶೇಷ ಅತಿಥಿ ಎನಿಸಿಕೊಂಡಿದ್ದು ಸ್ಮರಣೀಯವಾಗಿತ್ತು.

ಈ ಸಂದರ್ಭ ಅವರನ್ನು ದಮಾಮ್ ನಲ್ಲಿರುವ ಕಮ್ಯುನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ನ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯರವರು ತಮ್ಮ ಸ್ವಗೃಹದಲ್ಲಿ ವಿಶೇಷವಾಗಿ ಸತ್ಕರಿಸಿದರು. ಕಮ್ಯೂನಿಟಿ ಸೆಂಟರ್ ನ ಹಿತೈಷಿಗಳು ಭಾಗವಹಿಸಿದ್ದ ಈ ಸತ್ಕಾರ ಕೂಟದಲ್ಲಿ ಪದ್ಮಶ್ರೀ ಹಾಜಬ್ಬರಿಗೆ ಅವರ ಶೈಕ್ಷಣಿಕ ಸೇವೆಗೆ ನೆರವಾಗಲು ಆರ್ಥಿಕ ಸಹಾಯವನ್ನೂ ನೀಡಲಾಯಿತು.

ಸಮುದಾಯದ ಪ್ರೀತಿ ಮತ್ತು ಅಭಿಮಾನದ ಶ್ರೇಷ್ಠ ವ್ಯಕ್ತಿತ್ವ ಪದ್ಮಶ್ರೀ ಹಾಜಬ್ಬರವರದು. ಅವರು ನಮಗೆಲ್ಲರಿಗೂ ಪ್ರೇರಕ ಶಕ್ತಿ. ಅವರ ವ್ಯಕ್ತಿತ್ವ ಮತ್ತು ಸಾದನೆಯು ಸದಾ ಸ್ಮರಣೀಯವಾಗಿ ಇರುವಂತದ್ದು. ಇಂತಹ ಯೋಗವು ಅವರ ಶ್ರಮ-ಇಚ್ಚಾಶಕ್ತಿಯಿಂದ ಸಿಕ್ಕಿರುವಂತದ್ದು. ಸರಳತೆಯು ಅವರ ಆಸ್ತಿ, ಸೌಜನ್ಯತೆ ಅವರ ಅಸ್ತ್ರ, ಸಾಧನೆಗಳು ಅವರ ಹೆಗ್ಗುರುತು. ಹಾಗಾಗಿ ಅವರು ನಮ್ಮೆಲ್ಲರಿಗೂ ಅಭಿಮಾನ ಈ ಕಾರಣದಿಂದಲೇ ಕಮ್ಯುನಿಟಿ ಸೆಂಟರಿನ ಮೂಲಕ ಅವರಿಗೆ ವಿಶೇಷ ಅತಿಥ್ಯವನ್ನು ನೀಡಲಾಗಿದೆ ಎಂದು ಅಮ್ಜದ್ ಖಾನ್ ತಿಳಿಸಿದರು.

ಅವರೊಂದಿಗೆ ಸಮುದಾಯದ ಶಿಕ್ಷಣದ ಪ್ರಗತಿಗೆ ದುಡಿಯುತ್ತಿರುವ ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಸಾಧಿಸುವ ಕಿಚ್ಚು ಹಚ್ಚಿದ ರಫೀಕ್ ಮಾಸ್ಟರ್ ರವರು ಇರುವುದು ನಮಗೆ ಇನ್ನಷ್ಟು ಹೆಮ್ಮೆಯ ಸಂಗತಿ ಎಂದವರು ಹೇಳಿದರು. ಅತಿಥಿ ಸತ್ಕಾರದಲ್ಲಿ ಸೆಂಟರಿನ ಹಿತೈಷಿಗಳಾದ ನೌಶದ್ ಪೋಳ್ಯ, ನಾಸಿರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!