ರಾಜ್ಯರಾಷ್ಟ್ರೀಯ

ಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಸೂಪರ್‌ಸ್ಟಾರ್‌ ಅಮೀರ್ ಖಾನ್ ಪುತ್ರಿ



ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್‌ ಅಮೀರ್ ಖಾನ್ ಪುತ್ರಿ ಇರಾ ಖಾನ್ ಅವರು ಬಹುಕಾಲದ ಗೆಳೆಯ ನೂಪುರ್‌ ಶಿಖರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥದ ಸರಳ ಸಮಾರಂಭದಲ್ಲಿ ಅಮೀರ್‌ ಖಾನ್‌, ಅವರ ಮಾಜಿ ಪತ್ನಿ ಕಿರಣ್ ರಾವ್, ಅಳಿಯ ಇಮ್ರಾನ್ ಖಾನ್‌, ನಿರ್ದೇಶಕ ಅಶುತೋಷ್ ಗೌರಿಕರ್‌ ಸೇರಿದಂತೆ ಕುಟುಂಬದ ಸದಸ್ಯರು, ಸ್ನೇಹಿತರು, ಸಿನಿಮಾರಂಗದ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಇರಾ ಹಾಗೂ ನೂಪುರ್‌ ನಿಶ್ಚಿತಾರ್ಥ ಮಾಡಿಕೊಂಡಿರುವ ಪೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ಇವರಿಗೆ ಶುಭ ಕೋರುತ್ತಿದ್ದಾರೆ.

ಈ ವಿಶೇಷ ದಿನದಂದು ಇರಾ ಕೆಂಪು ಬಣ್ಣದ ಉದ್ದನೆಯ ಗವನ್‌ನಲ್ಲಿ ಕಂಗೊಳಿಸುತ್ತಿದ್ದರು. ಇತ್ತ ನೂಪುರ್ ಕಪ್ಪು ಬಣ್ಣದ ಟುಕ್ಸೆಡೊ ಸೂಟ್‌ನಲ್ಲಿ ಮಿಂಚಿದರು.

ಕೆಲವು ದಿನಗಳ ಹಿಂದಷ್ಟೆ ಇರಾ, ನೂಪುರ್‌ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ನೂಪುರ್ ಇರಾಗೆ ಪ್ರೇಮ ನಿವೇದನೆ ಮಾಡಿದ್ದರು.

ನೂಪುರ್‌ ಫಿಟ್ನೆಸ್ ಎಕ್ಸ್‌ಪರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇರಾ ಮತ್ತು ನೂಪುರ್‌ ಕಳೆದರೆಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!