ಜೆಸಿಐ ವಲಯ ತರಬೇತುದಾರರಾಗಿ ಖಲಂದರ್ ಶಾಫಿ ಎರಬೈಲ್ ಆಯ್ಕೆ
ಪುತ್ತೂರು: ಜೆಸಿ ಖಲಂದರ್ ಶಾಫಿ ಎರಬೈಲ್ ಅವರು ಜೆಸಿಐ ವಲಯ ತರಬೇತುದಾರರಾಗಿ ಆಯ್ಕೆಗೊಂಡಿದ್ದಾರೆ.
ಜೇಸಿಐ ಭಾರತದ ವಲಯ 15ರ ವಾರ್ಷಿಕ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಜೇಸಿಐ ಸೆನೆಡರ್ ರೊಯನ್ ಉದಯ ಕ್ರಾಸ್ತರಿಂದ ವಲಯ ತರಬೇತಿ ತೆರ್ಗಡೆ ಪ್ರಮಾಣ ಪತ್ರವನ್ನು ಪಡೆದುಕೊಂಡರು.
ಖಲಂದರ್ ಶಾಫಿಯವರು ಪುತ್ತೂರು ಜೂನಿಯರ್ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಜೂನಿಯರ್ ಜೇಸಿ ವಿಭಾಗದ ಔಟ್‌ಸ್ಟ್ಯಾಂಡಿಂಗ್ ಜೂನಿಯರ್ ಜೆಸಿ ಸ್ಪೀಕರ್ ಅವಾರ್ಡ್, ಜೂನಿಯರ್ ಜೆಸಿ ರಾಷ್ಟಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ರಾಷ್ಟಮಟ್ಟದ ಜೂನಿಯರ್ ಜೇಸಿ ತ್ರಿಸ್ಟಾರ್ ಮನ್ನಣೆ, ಜೆಸಿಐ ಸ್ಪೀಚ್ ಕ್ರಾಫ್ಟ್ ಬೆಸ್ಟ್ ಔಟ್‌ಸ್ಟ್ಯಾಂಡಿಂಗ್ ಪಾರ್ಟಿಸಿಪೇಟ್ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.
ಪದವಿ ವಿದ್ಯಾಭ್ಯಾಸವನ್ನು ಪುತ್ತೂರು ಸಂತ ಪಿಲೋಮಿನಾ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿ (HR) ಉಜಿರೆ SDM ಕಾಲೇಜಿನಲ್ಲಿ ಪೂರೈಸಿದ್ದಾರೆ. ಎಸ್‌ಡಿಎಂ ಕಾಲೇಜು ವಿದ್ಯಾರ್ಥಿ ಮಾನವ ಸಂಪನ್ಮೂಲ ವಿಭಾಗದ ಸ್ಥಾಪಕಾಧ್ಯಕ್ಷರೂ ಆಗಿರುವ ಖಲಂದರ್ ಶಾಫಿಯವರು ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿವರ್ಹಿಸುತ್ತಿದ್ದಾರೆ.