ನಾನು ಗಾಂಧಿ ಕುಟುಂಬವನ್ನು ಪ್ರೀತಿಸುತ್ತೇನೆ:ರಾಜೀವ್ ಗಾಂಧಿ ಹಂತಕಿ ನಳಿನಿ
ನಾನು ಗಾಂಧಿ ಕುಟುಂಬವನ್ನು ಪ್ರೀತಿಸುತ್ತೇನೆ. ಅವರ ಕುಟುಂಬದ ಪ್ರತಿಯೊಬ್ಬರಿಗಾಗಿ ಪ್ರತಿದಿನ ಪ್ರಾರ್ಥಿಸುತ್ತಿದ್ದೆ ಎಂದು ರಾಜೀವ್ ಗಾಂಧಿ ಹಂತಕಿ ನಳಿನಿ, ತನ್ನ ಬಿಡುಗಡೆಯ ಬಳಿಕ ತಾನು ಮಾಡಿದ ಕೃತ್ಯಕ್ಕೆ ಪಶ್ಚಾತಾಪ ಪಟ್ಟ ಬಗ್ಗೆ ಹೇಳಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಲ್ಲಿ ವೆಲ್ಲೂರಿನ ಕಾರಾಗೃಹಕ್ಕೆ ಬಂದು ಪ್ರಿಯಾಂಕಾ ಗಾಂಧಿ ಅವರು ನನ್ನನ್ನು ಭೇಟಿಯಾದಾಗಲೇ ನನಗೆ ಅವರ ಮೇಲೆ ಪ್ರೀತಿ, ಗೌರವ ಮೂಡಿತ್ತು. ನನಗೆ ಈಗಾಗಲೇ ಸಾಕಷ್ಟು ಪಶ್ಚಾತ್ತಾಪವಾಗಿದೆ. ಮಾಡಿದ ತಪ್ಪಿಗೆ ದೊಡ್ಡ ಬೆಲೆಯನ್ನೇ ತೆತ್ತಿದ್ದೇನೆ. ನನ್ನ ಪತಿ ಮತ್ತು ಮಗಳೊಂದಿಗೆ ಹೊಸ ಬದುಕು ಆರಂಭಿಸುತ್ತೇನೆ ಎಂದು ಭಾವುಕರಾಗಿ ಹೇಳಿದರು.