ರಾಜಕೀಯರಾಷ್ಟ್ರೀಯ

ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲವೆಂದು ಟವರ್ ಹತ್ತಿದ ಆಮ್ ಆದ್ಮಿ ಪಕ್ಷದ ಮುಖಂಡ



ನವದೆಹಲಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ, ಹಲವು ನಾಯಕರು ಈ ಬಾರಿ ನಮಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿರುತ್ತಾರೆ. ಆದರೆ ಕೆಲವೊಂದು ಬಾರಿ ನಾಯಕರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಅನೇಕ ನಾಯಕರು ಟಿಕೆಟ್ ಲಭಿಸದಿರುವುದಕ್ಕೆ ತಮ್ಮ ಅಸಮಾಧಾನ ಹಾರಹಾಕಿರುವುದನ್ನು ಕಂಡಿದ್ದೇವೆ. ಈ ವೇಳೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಲಭಿಸಿಲ್ಲ ಎಂದಾಗ, ಕೆಲವು ನಾಯಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇದೀಗ ಇಂತಹದ್ದೇ ಒಂದು ಪ್ರಸಂಗ ನಡೆದಿದೆ.

ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಲರ್ ಹಸೀಬ್ ಉಲ್ ಹಸನ್ ಅವರಿಗೆ ದೆಹಲಿ ಮುನ್ಸಿಪಲ್ (MCD) ಕಾರ್ಪೋರೇಷನ್ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಲ್ಲ. ಇದಕ್ಕೆ ಕೋಪಗೊಂಡ ಹಸೀಬ್ ಉಲ್ ಹಸನ್ ವಿದ್ಯುತ್ ಟ್ರಾನ್ಸ್ಮಿಷನ್ ಟವರ್ ಏರಿದ್ದಾರೆ.

ಟಿಕೆಟ್ ಲಭ್ಯವಾಗದ ಹಿನ್ನಲೆಯಲ್ಲಿ ಅತೃಪ್ತರಾದ ಹಸೀಬ್, ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿಯಿರುವ ಟ್ರಾನ್ಸ್ಮಿಷನ್ ಟವರ್ ಏರಿದ್ದಾರೆ. ಟವರ್ ಮೇಲೆ ಹತ್ತಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಸೀಬ್ ಟವರ್ ಏರಿ ಪ್ರತಿಭಟಿಸುವ ವೇಳೆ ಅನೇಕ ಜನ ಸೇರಿದ್ದಾರೆ. ಈ ವೇಳೆ ಬೆಂಬಲಿಗರು ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿದಂತಹ ಘಟನೆಯೂ ನಡೆದಿದೆ ಎಂದು ವರದಿಯಾಗಿದೆ.

ಹಸೀಬ್ ಉಲ್ ಹಸನ್ ಟವರ್ ಏರಿ ಪ್ರತಿಭಟಿಸುತ್ತಿದ್ದಂತೆ, ಪೊಲೀಸರು ಕೆಳಗಿಳಿದು ಬರುವಂತೆ ಮನವೋಲಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!