ಕರಾವಳಿ

ಜಟ್ಟಿಪಳ್ಳ ಮದರಸದಲ್ಲಿ ಎಸ್ ಜೆ ಎಂ ಸುಳ್ಯ ರೇಂಜ್ ಮಟ್ಟದ ಪ್ರತಿಭಾ ಸಂಗಮ

ಸುಳ್ಯ ಸುನ್ನಿ ಜಂಹಿಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ) ವತಿಯಿಂದ ರೇಂಜ್ ಮಟ್ಟದ ಪ್ರತಿಭಾ ಸಂಗಮ 2022 ಮದರಸಾ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಇಂದು ಜಟ್ಟಿಪಳ್ಳ ಮದರಸ ಸಭಾಂಗಣದಲ್ಲಿ ನಡೆಯಿತು.


ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಸುಮಾರು 24 ಮದರಸಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮದರಸ ಆವರಣದಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು.


ಪ್ರತಿಭಾ ಸಂಗಮದಲ್ಲಿ ಜಟ್ಟಿಪಳ್ಳ ಬುಸ್ತಾನುಲ್ ಉಲೂಮ್ ಮದರಸ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಿದ ವಿಜ್ಞಾನ ಮಾದರಿ ಕರಕುಶಲ ವಸ್ತು ಸಂಗ್ರಹ, ಕಸದಿಂದ ರಸ, ಪುರಾತನ ಕಾಲದ ವಸ್ತುಗಳ ಸಂಗ್ರಹ, ಕಲಾ ಪ್ರದರ್ಶನ, ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಕರಪತ್ರ ವಿತರಣೆ ಕಾರ್ಯಕ್ರಮ, ರಕ್ತದ ಮಾದರಿಯ ಗ್ರೂಪ್ ಸಂಗ್ರಹಣೆ, ಸೌಹಾರ್ದತೆ ಪ್ರತೀಕವಾಗಿ ಜಟ್ಟಿಪಳ್ಳ ಪರಿಸರದ ಎಲ್ಲಾ ಧಾರ್ಮಿಕ ಕೇಂದ್ರಗಳ, ಸಾಂಸ್ಕೃತಿಕ ಕಾರ್ಯಕ್ರಮಗಳ , ಶೈಕ್ಷಣಿಕ ಕೇಂದ್ರಗಳ ಚಿತ್ರಗಳ ಅನಾವರಣ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ಗಾಂಧಿನಗರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆಎಮ್ ಮುಸ್ತಫ ವಸ್ತು ಪ್ರದರ್ಶನದ ಮಳಿಗೆಯನ್ನು ಉದ್ಘಾಟಿಸಿದರು.
ಸ್ವಾಗತ ಸಮಿತಿ ಚೇರ್ಮನ್ ರಶೀದ್ ಜಟ್ಟಿ ಪಳ್ಳ ಜಾಗೃತಿ ಕರಪತ್ರ ವಿತರಣೆಯನ್ನು ಬಿಡುಗಡೆಗೊಳಿಸಿದರು.
ಸ್ಥಳೀಯ ಸಂಘ ಸಂಸ್ಥೆಗಳಿಂದ ನೀಡಲ್ಪಟ್ಟ ತಂಪು ಪಾನೀಯಗಳ ಕೇಂದ್ರವನ್ನು ಜಟ್ಟಿಪಳ್ಳ ಮದರಸ ಸಮಿತಿ ಅಧ್ಯಕ್ಷ ಶರೀಫ್ ಸುದ್ದಿ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹೀದ್, ಸುಳ್ಯ ಎಸ್ ಜೆ ಎಂ ಸಮಿತಿ ಅಧ್ಯಕ್ಷ ಮಹಮ್ಮದ್ ಸಕಾಫಿ ಮೊಗರ್ಪಣೆ, ಕಾರ್ಯದರ್ಶಿ ನಿಸಾರ್ ಸಕಾಫಿ, ಆಯೋಜಕದಲ್ಲಿ ಓರ್ವರಾದ ಕಲಂದರ್ ಎಲಿಮಲೆ, ಸ್ವಾಗತ ಸಮಿತಿ ಕನ್ವೀನರ್ ಲತೀಫ್ ಸಕಾಫಿ ಗೂನಡ್ಕ, ಸುಳ್ಯ ಎಸ್ ಎಮ್ ಎ ಅಧ್ಯಕ್ಷ ಹಮೀದ್ ಬೀಜ ಕೊಚ್ಚಿ, ಸಿದ್ದೀಕ್ ಕಟ್ಟೆಕರ್ ಹಾಗೂ ಸುಳ್ಯ ತಾಲೂಕಿನ ವಿವಿಧ ಮದರಸ ಅಧ್ಯಾಪಕರುಗಳು, ಜಟ್ಟಿಪಳ್ಳ ಮದರಸ ಸಮಿತಿ ಪದಾಧಿಕಾರಿಗಳು ಸದಸ್ಯರು, ಸ್ಥಳೀಯ ನೂರಾರು ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!