ಉಪ್ಪಿನಂಗಡಿ: ಎಸ್‌ಡಿಪಿಐ ವತಿಯಿಂದ ಮಹಿಳಾ ಚುನಾವಣಾ ಪೂರ್ವಭಾವಿ ಸಭೆ
ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಹಿಳಾ ಚುನಾವಣಾ ಪೂರ್ವಭಾವಿ ಸಭೆಯು
ಝರೀನಾ ರವರ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ಎ.5ರಂದು ನಡೆಯಿತು.
ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್ಡಿಪಿಐ ರಾಜ್ಯ ಮಹಿಳಾ ಚುನಾವಣಾ ಉಸ್ತುವಾರಿ ನಸ್ರಿಯಾ ಬೆಳ್ಳಾರೆಯವರು ಮಾತನಾಡಿ ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿದ್ದು ಮಹಿಳಾ ಮತದಾರರಿಗೆ ಅಭ್ಯರ್ಥಿಗೆ ಮತಯಾಚಿಸುವುದರೊಂದಿಗೆ ಸುಳ್ಳು ಕೇಸ್ ನಲ್ಲಿ ಅನ್ಯಾಯವಾಗಿ ಬಂಧಿಸಿ ನ್ಯಾಯ ನಿರಾಕರಣೆ ಮಾಡುತ್ತಿರುವ ವಿಚಾರದ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಹಾಗೂ ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆರವರ ಗೆಲುವಿಗೆ ಅವಿರತ ಶ್ರಮ ವಹಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಪುತ್ತೂರು ತಾಲೂಕಿನ ಮಹಿಳಾ ಚುನಾವಣಾ ಉಸ್ತುವಾರಿ ಝಾಹಿದಾ ಸಾಗರ್ ಮತದಾರರನ್ನು ಚುನಾವಣಾ ಪ್ರಚಾರ ಮಾಡುವ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸೌಧ ಮಠ, ನಫೀಸಾ ಮಠ ಮತ್ತು ಹಲವು ಮಹಿಳಾ ನಾಯಕಿಯರು ಉಪಸ್ಥಿತರಿದ್ದರು ಹಾಗೂ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ಮುಂತಾಝ್ ಸ್ವಾಗತಿಸಿದರು.