Uncategorized

 ತಾಲೂಕಿನ 20ರಷ್ಟು ಆಟೋ ರಿಕ್ಷಾ ನಿಲ್ದಾಣಗಳಿಗೆ ದಿವ್ಯಪ್ರಭಾ ಗೌಡ ಭೇಟಿ

ಪುತ್ತೂರು: ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಪುತ್ತೂರು ತಾಲೂಕಿನ ಸುಮಾರು 20 ಆಟೋ ರಿಕ್ಷಾ ನಿಲ್ದಾಣಗಳಲ್ಲಿ ರಿಕ್ಷಾ ಚಾಲಕರ ಜೊತೆ ಕನ್ನಡ ರಾಜ್ಯೋತ್ಸವ ಸಂಭ್ರಮ ಆಚರಿಸಿ ಆಟೋ ಚಾಲಕರ ಸಂಕಷ್ಟಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ತಾವು ನೆರವಾಗುವ ಬಗ್ಗೆ ಭರವಸೆ ನೀಡಿದ್ದಾರೆ.

ಪುತ್ತೂರು ಪೇಟೆ ಪ್ರದೇಶದ ಅನೇಕ ಆಟೋ ನಿಲ್ದಾಣಗಳಿಗೆ ತೆರಳಿದ ದಿವ್ಯಪ್ರಭಾ ನೇತೃತ್ವದ ತಂಡ ಆಟೋ ಚಾಲಕರೊಂದಿಗೆ ಮಾತುಕತೆ ನಡೆಸಿದ್ದಲ್ಲದೇ ಚಾಲಕರಿಗೆ ಕ್ವಿಝ್ ಏರ್ಪಡಿಸಿ ಬಹುಮಾನವನ್ನೂ ವಿತರಿಸಿದ್ದಾರೆ.

ವಿಟ್ಲ, ಉಪ್ಪಿನಂಗಡಿ, ಆರ್ಲಪದವು, ಕುಂಬ್ರ ಮತ್ತಿತರ ಅನೇಕ ಗ್ರಾಮಾಂತರ ಪ್ರದೇಶದ ಆಟೋ ನಿಲ್ದಾಣಗಳಿಗೆ ತೆರಳಿದ ದಿವ್ಯಪ್ರಭಾ ಗೌಡರವರು ಆಟೋ ಚಾಲಕರ ಜೊತೆ ಮಾತುಕತೆ ನಡೆಸಿದರು. ಅನೇಕ ಆಟೋ ಚಾಲಕರು ತಮ್ಮ ಕಷ್ಟ, ಸಮಸ್ಯೆಗಳನ್ನು ದಿವ್ಯಪ್ರಭಾರವರಲ್ಲಿ ಹೇಳಿಕೊಂಡರು. ಕುಂಬ್ರ ಮತ್ತು ಉಪ್ಪಿನಂಗಡಿಯ ಆಟೋ ಚಾಲಕರ ಬೇಡಿಕೆಯಂತೆ ಆಟೋ ನಿಲ್ದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೆಲವೇ ದಿನಗಳಲ್ಲಿ ಮಾಡಿಕೊಡುವುದಾಗಿ ದಿವ್ಯಪ್ರಭಾ ಗೌಡ ಹೇಳಿದರು. ಅನೇಕ ಹಿರಿಯ ಆಟೋ ಚಾಲಕರಿಗೆ ಸನ್ಮಾನವನ್ನು ಕೂಡ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು.

ಆಟೋ ಚಾಲಕರನ್ನು ಭೇಟಿಯಾಗಿ ಅವರ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿರುವ ದಿವ್ಯಪ್ರಭಾ ಗೌಡರ ನಡೆ ತಾಲೂಕಿನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಮಧೇನು ವಿವಿಧೊದ್ದೇಶ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮಾಧವ ಗೌಡ, ಸ್ಪರ್ಶ ಸಹಾಯವಾಣಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು, ಬಾಲಕೃಷ್ಣ ರೈ ಪೊರ್ದಾಳ್  ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!