ಬಿಗ್ ಬಾಸ್ ಮನೆಗೆ ಚೈತ್ರಾ ಕುಂದಾಪುರ ಎಂಟ್ರಿ
ಬೆಂಗಳೂರು: ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ.
ನಟ ಸುದೀಪ್ ನಿರೂಪಿಸುವ ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಗೌತಮಿ ಜಾದವ್ ಆಯ್ಕೆಯಾದರೆ 3ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ.
ಚೈತ್ರಾ ಕುಂದಾಪುರ ಪ್ರಖರ ವಾಗ್ಮಿಯಾಗಿದ್ದು ವಂಚನೆ ಕೇಸೊಂದರಲ್ಲಿ ಸಿಲುಕಿ ಜೈಲು ಸೇರಿದ ಬಳಿಕ ಕೆಲ ಸಮಯ ನೇಪಥ್ಯಕ್ಕೆ ಸರಿದಿದ್ದರು. ಈಗ ಬಿಗ್‌ಬಾಸ್ ಸ್ಪರ್ಧಿಯಾಗುವ ಮೂಲಕ ಚೈತ್ರಾ ಮರಳಿ ಸುದ್ದಿಯಾಗಿದ್ದಾರೆ.
ಬಿಗ್‌ಬಾಸ್‌ನಲ್ಲಿ 16 ಜನ ಸ್ಪರ್ಧಿಗಳು ಇರಲಿದ್ದು, ಅವರಿಗೆ ಚೈತ್ರಾ ಪೈಪೋಟಿ ಕೊಡಬೇಕು. ಗೆದ್ದರೆ ದೊಡ್ಡ ಮೊತ್ತದ ಬಹುಮಾನ ಸಿಗುತ್ತದೆ. ಬಿಗ್‌ಬಾಸ್ 11ನೇ ಕಂತು ಶುರುವಾಗಲಿದೆ.