ರಾಷ್ಟ್ರೀಯ

ವಿರಾಟ್ ಕೊಹ್ಲಿ ಖಾಸಗೀತನಕ್ಕೆ ಧಕ್ಕೆ- ಸಿಬ್ಬಂದಿ ವಿರುದ್ಧ ಕ್ರಮ

ಪರ್ತ್‌: ಟಿ20 ವಿಶ್ವಕಪ್ ಕ್ರಿಕೆಟ್‌ಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಅಲ್ಲಿನ ಖಾಸಗಿ ಹೋಟೆಲ್‌ನಿಂದ ಭಾರಿ ಮುಜುಗರವಾಗಿದೆ.

ಪರ್ತ್‌ನ ಕ್ರೌನ್ ಪರ್ತ್‌ ಹೋಟೆಲ್‌ನ ಕೆಲ ಸಿಬ್ಬಂದಿ ವಿರಾಟ್ ಕೊಹ್ಲಿ ಅವರ ರೂಮ್‌ನ ಫೋಟೊ, ವಿಡಿಯೊಗಳನ್ನು ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೌನ್ ಪರ್ತ್ ಹೋಟೆಲ್ ಆಡಳಿತ ತಪ್ಪಿತಸ್ಥ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಅಲ್ಲದೇ ನಡೆದಿರುವ ಅಚಾತುರ್ಯಕ್ಕೆ ಕ್ಷಮೆಯಾಚನೆ ಮಾಡಿ, ಮುಂದೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.

ಖಾಸಗಿನತನಕ್ಕೆ ದಕ್ಕೆ ಬಂದಿದ್ದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕೊಹ್ಲಿ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಅಭಿಮಾನಿಗಳೇ ಆಗಲಿ, ಯಾರೇ ಆಗಲಿ ಖಾಸಗಿತನಕ್ಕೆ ದಕ್ಕೆ ತಂದರೆ ಸಹಿಸಲು ಆಗುವುದಿಲ್ಲ. ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಿ’ ಎಂದಿದ್ದರು.

Leave a Reply

Your email address will not be published. Required fields are marked *

error: Content is protected !!