ಮೊದಲ ಗಂಡ ಸಾಯ್ತಾನೆ’ ಅನ್ನೋ ಜ್ಯೋತಿಷಿ ಭವಿಷ್ಯಕ್ಕೆ ಲೌವರ್‌ನನ್ನೇ ಕೊಂದ ಪ್ರೇಯಸಿ..!
ತಿರುವನಂತಪುರಂ: ಮೊದಲನೇ ಗಂಡ ಸಾಯುತ್ತಾನೆ ಎಂಬ ಜ್ಯೋತಿಷಿಯ ಭಂಡ ಭವಿಷ್ಯ ನಂಬಿ ಯುವತಿಯೋರ್ವಳು ತನ್ನ ಪ್ರಿಯಕರನಿಗೆ ಕಷಾಯದಲ್ಲಿ ವಿಷ ಬೆರೆಸಿ ನೀಡಿ ಹತ್ಯೆಗೈದಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ (23) ಎಂಬಾತ ಮೃತ ದುರ್ದೈವಿ. ಗ್ರೀಷ್ಮಾ ಪ್ರಿಯಕರನನ್ನು ಕೊಂದ ಆರೋಪಿ ಯುವತಿ.
ಗ್ರೀಷ್ಮಾ ಮತ್ತು ಶರೋನ್ ಒಂದು ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಅಲ್ಲದೇ ಮನೆಯವರು ಗ್ರೀಷ್ಮಾಗೆ ಬೇರೆಯವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು.
ಫೆಬ್ರವರಿಯಿಂದ ಗ್ರೀಷ್ಮಾ ಹಾಗೂ ಶರೋನ್ ನಡುವೆ ಕೆಲವು ಮನಸ್ತಾಪಗಳು ಪ್ರಾರಂಭವಾಯಿತು. ಹೀಗಿದ್ದರೂ ಇಬ್ಬರೂ ರಿಲೇಶನ್ ಶಿಪ್ ಮಂದುವರೆಸಿದರು. ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದ್ದರಿಂದ ಶರೋನ್ ಅನ್ನು ಬಿಡುವ ಸಲುವಾಗಿ, ವಿಷ ನೀಡಿ ಕೊಲ್ಲಲು ನಿರ್ಧರಿಸಿದಳು.
ಮೊದಲಿಗೆ ಸಮಾಧಾನದಿಂದ ಮೃದು ಸ್ವಭಾವದಿಂದ ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ತಿಳಿಸಿದಳು. ಆದರೆ ಇದಕ್ಕೆ ಶರೋನ್ ರಾಜ್ ನಿರಾಕರಿಸಿದ್ದಾನೆ.
ಅಲ್ಲದೇ ಜ್ಯೋತಿಷಿ ಒಬ್ಬರು ಗ್ರೀಷ್ಮಾ ಜಾತಕದ ಪ್ರಕಾರ, ಆಕೆಯ ಮೊದಲ ಪತಿ ಸಾಯುತ್ತಾನೆ ಎಂದು ಹೇಳಿದ್ದರು. ಇದರಿಂದ ಭಯಗೊಂಡು ಆತನೊಂದಿಗೆ ಬ್ರೇಕ್ ಮಾಡಿಕೊಳ್ಳಲು ಪ್ರಯತ್ನಿಸಿದಳು.
ಲವ್ ಬ್ರೇಕ್ ಅಪ್ ಮಾಡಿಕೊಳ್ಳುವುದಕ್ಕಾಗಿ ಶರೋನ್ ರಾಜ್ ಅನ್ನು ಕೊಂದಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ಕೊಲೆ ಮಾಡಲು ಮೊದಲೇ ಪ್ರೀ ಪ್ಲಾನ್ ಮಾಡಿದ್ದ ಗ್ರೀಷ್ಮಾ ಅಕ್ಟೋಬರ್ 14 ರಂದು ಶರೋನ್ ರಾಜ್ ಅನ್ನು ಮನೆಗೆ ಕರೆಸಿಕೊಂಡಿದ್ದಳು.
ಈ ವೇಳೆ ಕಷಾಯದೊಂದಿಗೆ ಕೀಟನಾಶಕವನ್ನು ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ಪ್ರಿಯಕರ ವಾಂತಿ ಮಾಡಿಕೊಳ್ಳಲು ಆರಂಭಿಸಿ, ಬಳಿಕ ಸ್ನೇಹಿತನೊಂದಿಗೆ ತೆರಳಿದನು.
ಅಕ್ಟೋಬರ್ 25 ರಂದು ಶರೋನ್ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು. ಆತನ ಸಾವಿಗೆ ಪ್ರೇಯಸಿಯೇ ಕಾರಣ ಎಂದು ಶರೋನ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಪ್ರಕರಣ ಸಂಬಂಧ ಅಕ್ಟೋಬರ್ 20 ರಂದು ಶರೋನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ತಾನೂ ಯಾರ ಮೇಲೂ ಅನುಮಾನ ಹೊಂದಿಲ್ಲ ಎಂದು ತಿಳಿಸಿ ಕೊನೆಯುಸಿರೆಳೆದಿದ್ದಾನೆ.
ಶರೋನ್‍ಗೆ ಏನು ನೀಡಿದ್ದಾಳೆ ಎಂದು ತಿಳಿದುಕೊಳ್ಳಲು ಆತನ ಸಹೋದರ ಗ್ರೀಷ್ಮಾಗೆ ನಿರಂತರ ಕರೆ ಮಾಡುತ್ತಿದ್ದನು. ಆದರೆ ಭಯದಿಂದ ಏನನ್ನೂ ಕೂಡ ಆಕೆ ಹೇಳಿಕೊಳ್ಳಲಿಲ್ಲ. ಒಂದು ವೇಳೆ ಸತ್ಯ ತಿಳಿಸಿದ್ದರೆ ಆತನನ್ನು ಉಳಿಸಬಹುದಾಗಿತ್ತು.
ಇದೀಗ 8 ಗಂಟೆಗಳ ವಿಚಾರಣೆಯ ಬಳಿಕ ತಪ್ಪೊಪ್ಪಿಕೊಂಡ ಗ್ರೀಷ್ಮಾಳನ್ನು ತಿರುವನಂತಪುರಂನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 25ರಂದು ಈತ ಮೃತಪಟ್ಟಿದ್ದಾನೆ. ಅಕ್ಟೋಬರ್ 31ರಂದು ಎಂಟು ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ಪ್ರೇಯಸಿಯೇ ತನ್ನ ಪ್ರಿಯಕರನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.