ಕಳ್ಳತನ ನಡೆಸಲು ಮನೆಗೆ ನುಗ್ಗಿದ ಕಳ್ಳ ಎಸಿ ಆನ್ ಮಾಡಿ ನಿದ್ದೆ ಮಾಡಿದ..!
ಕಳ್ಳತನ ಮಾಡಲೆಂದು ಮನೆಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಕಳ್ಳತನ ಮಾಡುವುದನ್ನು ಬಿಟ್ಟು AC ಆನ್ ಮಾಡಿ ನೆಲದಲ್ಲಿ ಮಲಗಿ ಹಾಯಾಗಿ ನಿದ್ರಿಸಿದ ಘಟನೆ ಲಕ್ನೌನ ಇಂದಿರಾನಗರ ಪ್ರದೇಶದಿಂದ ವರದಿಯಾಗಿದೆ.
ಜೂ.2ರಂದು ಬೆಳಗ್ಗಿನ ಜಾವ ಈತ ವಾರಣಾಸಿಯಲ್ಲಿ ಕರ್ತವ್ಯದಲ್ಲಿರುವ ಡಾ ಸುನೀಲ್ ಪಾಂಡೆ ಅವರ ಮನೆಗೆ ಕಳ್ಳ ನುಗ್ಗಿದ್ದು ಮನೆಯಲ್ಲಿ ಯಾರೂ ಇರಲಿಲ್ಲ. ಕಳ್ಳತನ ಮಾಡುವ ಬದಲು ಕಳ್ಳ ಆರಾಮವಾಗಿ ನಿದ್ದೆಗೆ ಜಾರಿದ್ದ.