ರಾಜ್ಯರಾಷ್ಟ್ರೀಯ

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಬೀಚ್ ವಾಲಿಬಾಲ್ ತಂಡ ರಾಷ್ಟ್ರೀಯ ಮಟ್ಟಕ್ಕೆ ಪ್ರವೇಶ



ಕರ್ನಾಟಕ ಸರಕಾರ ಜಿಲ್ಲಾಡಳಿತ .ಜಿಲ್ಲಾ ಪಂಚಾಯತ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಪ್ರವಾಸೋದ್ಯಮ ಇಲಾಖೆ. ಉತ್ತರ ಕನ್ನಡ ಹಾಗೂ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ. ಇದರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದ ಕಾಸರಗೋಡು ಈಕೋ ಬೀಚ್ ನಲ್ಲಿ 28 ,29 ,30 ರಂದು ನಡೆದ ರಾಷ್ಟ್ರೀಯ ಬೀಚ್ ವಾಲಿಬಾಲ್  ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಮಹಿಳೆಯರ ತಂಡ ನಾಲ್ಕನೇ ಸ್ಥಾನ ಗೆದ್ದುಕೊಂಡಿತ್ತು.

ಬೇರೆ ಬೇರೆ ರಾಜ್ಯದಿಂದ ಒಟ್ಟು ಇಪ್ಪತ್ತು ತಂಡಗಳು ಭಾಗವಹಿಸಿದ್ದವು .ಈ ಪಂದ್ಯಕೂಟದಲ್ಲಿ ಕರ್ನಾಟಕದ ರಾಜ್ಯ ತಂಡವನ್ನು ಪ್ರತಿನಿಧಿಸಿದ  ಆಟಗಾರ್ತಿ ಶಿಲ್ಪ ಹಾಗೂ ಶ್ರೀದೇವಿ ಅವರು  ಈ ಮೊದಲು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಆಯೋಜಿಸಿದ 36 ನೇ ನ್ಯಾಷನಲ್ ಗೇಮ್ಸ್  ಸೂರತ್ನಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಬೀಚ್ ವಾಲಿಬಾಲ್ ಚರಿತ್ರೆಯಲ್ಲಿ ಪ್ರಥಮವಾಗಿ ಎರಡು ರಾಷ್ಟ್ರೀಯ ಪಂದ್ಯಾಟಕ್ಕೆ ಭಾಗವಹಿಸಿದ್ದು ಮೊತ್ತ ಮೊದಲಾಗಿದೆ.

ಬೀಚ್ ವಾಲಿಬಾಲ್ ಮಹಿಳೆಯರ ತಂಡಕ್ಕೆ ಮಿತ್ರ ವೃಂದ ವಾಲಿಬಾಲ್ ಅಕಾಡೆಮಿಯ ನೇತೃತ್ವದಲ್ಲಿ ಸಂತ ಫಿಲೋಮಿನಾ ಕಾಲೇಜ್ ಕ್ರೀಡಾಂಗಣದಲ್ಲಿ ಎನ್ ಐ ಎಸ್  ರಾಷ್ಟ್ರೀಯ ಕೋಚ್  ಪಿ ವಿ ನಾರಾಯಣ್ ಮತ್ತು ಹಮೀದ್ ಸಾಜ ಅವರು ಇವರಿಗೆ   ತರಬೇತಿಯನ್ನು ನೀಡಿರುತ್ತಾರೆ. ನಾರಾಯಣ್ ಅವರು ಸೂರತ್ತಿನಲ್ಲಿ ನಡೆದ ನ್ಯಾಷನಲ್ ಗೇಮ್ಸ್ ನ ತಾಂತ್ರಿಕ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು ಹಮೀದ್ ಸಾಜ ಅವರು ಪುರುಷರ ಮತ್ತು ಮಹಿಳಾ ತಂಡದ ಕೋಚ್ ಆಗಿ ಭಾಗವಹಿಸಿದ್ದರು.

.

Leave a Reply

Your email address will not be published. Required fields are marked *

error: Content is protected !!