ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ
ಕರ್ನಾಟಕ ಸಿಎಂ ಸಿದ್ದರಾಮಯ್ಯರವರು ಇಂದು ಆ.3ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ದೆಹಲಿಯ ಸಂಸತ್ ಭವನದಲ್ಲಿ ತಮ್ಮ ಜನ್ಮದಿನದಂದೇ ಪ್ರಧಾನಿಯವರನ್ನ ಭೇಟಿ ಮಾಡಿರುವುದು ವಿಶೇಷವಾಗಿದೆ. ಇನ್ನು ಇದೇ ವೇಳೆ ಸಿದ್ದರಾಮಯ್ಯ, ಮೋದಿಯವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿಯವರನ್ನು ಭೇಟಿ ಮಾಡಿದ್ದು, ಇನ್ನು ಇದೇ ವೇಳೆ ಸಿದ್ದರಾಮಯ್ಯ, ಮೋದಿಯವರಿಗೆ ಮೈಸೂರು ಪೇಟ, ಶಾಲು ಹಾಗೂ ದಸರಾ ಅಂಬಾರಿಯ ಸ್ಮರಣಿಕೆ ನೀಡಿ ಗೌರವಿಸಿದರು