ಕಳ್ಳತನ ಪ್ರಕರಣದ ಆರೋಪಿ ಮಹಿಳೆ ಬಂಧನ
ಮಂಗಳೂರು: ಕುತ್ತಾರ್ ನ ಮನೆಯೊಂದರಿಂದ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೊಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿವಾಸಿ ಸರೋಜಾದೇವಿ ಬಂಧಿತ ಆರೋಪಿ.
ಮೂರು ತಿಂಗಳ ಹಿಂದೆ ಕುತ್ತಾರ್ ನಿವಾಸಿ ರಮೇಶ್ ಅವರ ಮನೆಯಿಂದ ಚಿನ್ನಾಭರಣ ಕಳವಾಗಿತ್ತಲ್ಲದೆ, ಮನೆ ಕೆಲಸಕ್ಕಿದ್ದ ಸರೋಜಾದೇವಿ ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.