ಬೆಳ್ತಂಗಡಿ: 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ: 60/2009, ಕಲಂ:420 ಐಪಿಸಿ ಪ್ರಕರಣದಲ್ಲಿ, ಬಯೋಗ್ಯಾಸ್ ಸಂಪರ್ಕ ಮಾಡಿಸುವುದಾಗಿ ನಂಬಿಸಿ, ಹಣ ಪಡೆದು ಮೋಸ ಮಾಡಿದ ಪ್ರಕರಣದಲ್ಲಿ, ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಾಸನ ಚನ್ನರಾಯಪಟ್ಟಣ ನಿವಾಸಿ ಎಸ್ ಎನ್ ಚಂದ್ರೆಗೌಡ ಎಂಬಾತನನ್ನು, ಹಾಸನ ಚನ್ನರಾಯಪಟ್ಟಣದ ಬೆಳಗಿಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ಜ. 20ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


